ನಿಟ್ಟೆ ಮಾನವಿಕ ವಿಭಾಗದಿಂದ ಆಶಾ ಕಾರ್ಯಕರ್ತೆಯರಿಗೆ ಕಾರ್ಯಾಗಾರ

ನಿಟ್ಟೆ: ಏ.28 ರಂದುನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾನವಿಕ ವಿಭಾಗದ ವತಿಯಿಂದ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಹರೀಶ್ ಆಚಾರ್ಯ ಹಾಗೂ ಎನ್.ಸಿ.ಡಿ ವೈದ್ಯಾಧಿಕಾರಿ ಡಾ. ನಿಖಿಲ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ವಹಿಸಿದ್ದರು.

ಒಂದು ದಿನದ ಕಾರ್ಯಾಗಾರದಲ್ಲಿ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಗೆ ಅವರ ದೈನಂದಿನ ಔದ್ಯೋಗಿಕ ಜವಾಬ್ದಾರಿಯನ್ನು ನಿಭಾಯಿಸಲು ಅನುಕೂಲವಾಗುವಂತಹ 3 ವಿಷಯಗಳ ಬಗೆಗೆ ಮಾಹಿತಿಯನ್ನು ನೀಡಲಾಯಿತು.

ಮಾನವಿಕ ವಿಭಾಗದ ಸಹಪ್ರಾಧ್ಯಾಪಕ ಶ್ರೀನಿವಾಸ ನೆಕ್ಕರ್ ‘ಬೇಸಿಕ್ ಕಮ್ಯೂನಿಕೇಟಿವ್ ಇಂಗ್ಲೀಷ್’ ಬಗ್ಗೆ, ಶ್ರೀಮತಿ ಸೋನಿಯಾ ಲೋಬೋ ‘ಬೇಸಿಕ್ ಮೆಡಿಕಲ್ ಟರ್ಮಿನಾಲಜೀಸ್’ ಬಗ್ಗೆ ಮತ್ತು ಸಹಪ್ರಾಧ್ಯಾಪಕಿ ಶ್ರೀಮತಿ ಶ್ವೇತಾ ಭರತ್ ‘ಟೆಲಿಫೋನ್ ಎಟಿಕೆಟ್’ ಬಗ್ಗೆ ವಿವರಣೆ ನೀಡಿದರು.

ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಇಂತಹ ಕಾರ್ಯಾಗಾರಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾನವಿಕ ವಿಭಾಗದ ಮುಖ್ಯಸ್ಥೆ ರಶ್ಮಿ ಹೆಗ್ಡೆ ತಿಳಿಸಿದರು.

ಸಹಪ್ರಾಧ್ಯಾಪಕ ಶ್ರೀನಿವಾಸ ನೆಕ್ಕರ್ ಸ್ವಾಗತಿಸಿದರು, ಸಹಪ್ರಾಧ್ಯಾಪಕಿ ಸೋನಿಯಾ ವಂದಿಸಿದರು. ಸಹಪ್ರಾಧ್ಯಾಪಕಿ ಶ್ವೇತಾ ಭರತ್ ಕಾರ್ಯಕ್ರಮ ನಿರೂಪಿಸಿದರು.