ಬೆಂಗಳೂರು: ದೂರಸಂಪರ್ಕ ಇಲಾಖೆ (ಡಿಒಟಿ) ಐಐಟಿ ಹಾಗೂ ಬಿಪಿಒ ನೌಕರರಿಗೆ ಡಿಸೆಂಬರ್ 31ರ ವರೆಗೆ ಮನೆಯಿಂದ ಕೆಲಸ ಮಾಡಲು ಅನುಕೂಲವಾಗುವಂತೆ ನಿಯಮಗಳನ್ನು ಜಾರಿಗೊಳಿಸಿದೆ. ಇದರಿಂದ ಬಹುತೇಕ ಐಟಿ ಉದ್ಯೋಗಿಗಳಿಗೆ ವರದಾನವಾಗಿದೆ.
ಈ ಕ್ರಮವನ್ನು ಸ್ವಾಗತಿಸಿದ ಸಾಫ್ಟ್ವೇರ್ ಲಾಬಿ ನಾಸ್ಕಾಮ್ ಅಧ್ಯಕ್ಷ ಡೆಬ್ಜಾನಿ ಘೋಷ್ ಟೆಲಿಕಾಂ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಮತ್ತು ಡಿಒಟಿ ಕಾರ್ಯದರ್ಶಿಗೆ ಧನ್ಯವಾದ ಅರ್ಪಿಸಿದ್ದಾರೆ.
ಭಾರತದ ಅತಿದೊಡ್ಡ ಐಟಿ ಕಂಪನಿ ಟಿಸಿಎಸ್ ವಾಸ್ತವವಾಗಿ 2025 ರ ವೇಳೆಗೆ ತಮ್ಮ ಉದ್ಯೋಗಿಗಳ ಪೈಕಿ ಕೇವಲ 25% ಮಾತ್ರ ಕಚೇರಿಗಳಿಂದ ಕೆಲಸ ಮಾಡಲು ಉದ್ದೇಶಿಸಿದೆ ಎಂದು ಹೇಳಿದೆ. ಭಾರತದ ಉನ್ನತ ಐಟಿ ಕಂಪನಿಗಳು ತಮ್ಮ 90% ಕ್ಕಿಂತ ಹೆಚ್ಚು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ.