ಸದ್ಯದಲ್ಲೇ ನನಸಾಗಲಿದೆಯೇ ಡಿಕೆಶಿ ಸಿಎಂ ಕನಸು? ತಿರುಪತಿಗೆ ಭೇಟಿ ನೀಡಿದ ಡಿಸಿಎಂ

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ D. K. Shivakumar ಅವರ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆ ಮತ್ತೆ ಜೋರಾಗಿದೆ. ದಂಪತಿ ಸಮೇತವಾಗಿ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಹಲವು ಅರ್ಥಗಳಿಗೆ ಕಾರಣವಾಗಿದೆ.

ಮಂಗಳವಾರ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ Tirumala Venkateswara Temple ಗೆ ಪತ್ನಿ ಉಷಾ ಶಿವಕುಮಾರ್ Usha Shivakumar ಅವರೊಂದಿಗೆ ಭೇಟಿ ನೀಡಿದ ಡಿಕೆ ಶಿವಕುಮಾರ್, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅವರ ಜೊತೆ ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ Dr. H. D. Ranganath ಕೂಡ ಇದ್ದರು.

ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದಲ್ಲಿ ಮೂರು ವರ್ಷ ಪೂರ್ತಿಯಾದ ಹಿನ್ನೆಲೆ ಈ ಭೇಟಿ ರಾಜಕೀಯವಾಗಿ ಮಹತ್ವ ಪಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ಡಿಕೆ ಶಿವಕುಮಾರ್ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಗಮನಸೆಳೆಯುತ್ತಿದೆ. ದೇವರ ಮೇಲೆ ಅಪಾರ ನಂಬಿಕೆ ಹೊಂದಿರುವ ನಾಯಕ ಎಂಬ ಇಮೇಜ್ ಅವರಿಗೆ ಈಗಾಗಲೇ ಇದೆ.

ಇದಕ್ಕೂ ನಡುವೆ, ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಇನ್ನೂ ತಣ್ಣಗಾಗಿಲ್ಲ. ಸಿದ್ದರಾಮಯ್ಯ Siddaramaiah ಮುಖ್ಯಮಂತ್ರಿ ಆಗುವ ಮುನ್ನವೇ ಹೈಕಮಾಂಡ್ ಮಟ್ಟದಲ್ಲಿ “ಪವರ್ ಶೇರಿಂಗ್” ಬಗ್ಗೆ ಮಾತುಕತೆ ನಡೆದಿತ್ತು ಎಂಬ ರಾಜಕೀಯ ವದಂತಿಗಳು ಹಲವು ಬಾರಿ ಕೇಳಿಬಂದಿವೆ. ಸರ್ಕಾರ ಎರಡೂವರೆ ವರ್ಷ ಪೂರೈಸಿದ ನಂತರ ಡಿಕೆ ಶಿವಕುಮಾರ್ ಬೆಂಬಲಿಗರು “ಮುಂದಿನ ಸಿಎಂ ಡಿಕೆಶಿ” ಎಂಬ ಘೋಷಣೆಯನ್ನು ಹೆಚ್ಚಾಗಿ ಮಾಡತೊಡಗಿದ್ದರು.

ಆದರೆ ಕಾಂಗ್ರೆಸ್ ಹೈಕಮಾಂಡ್ ಇದುವರೆಗೆ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ವಿಚಾರ ಇನ್ನೂ ಊಹಾಪೋಹಗಳ ಮಟ್ಟದಲ್ಲೇ ಇದೆ. ತಿರುಪತಿ ಭೇಟಿ ಕೂಡ ಅದೇ ರಾಜಕೀಯ ಚರ್ಚೆಗೆ ಮತ್ತಷ್ಟು ಇಂಧನ ನೀಡಿದಂತಾಗಿದೆ.