ಖಾಸಗಿತನ ನೀತಿ ಉಲ್ಲಂಘನೆ: ವಾಟ್ಸ್ಆ್ಯಪ್‌ಗೆ ₹1,952.87 ಕೋಟಿ ದಂಡ.!

ಡಬ್ಲಿನ್: ಯುರೋಪಿಯನ್ ಒಕ್ಕೂಟಗಳ ದತ್ತಾಂಶ ಖಾಸಗಿತನ ನೀತಿಯನ್ನು ಉಲ್ಲಂಘಿಸಿರುವ ವಾಟ್ಸ್ಆ್ಯಪ್‌ಗೆ 22.5 ಕೋಟಿ ಯೂರೋ (ಅಂದಾಜು ₹1,952.87 ಕೋಟಿ) ದಂಡ ವಿಧಿಸಲಾಗಿದೆ.

ಐರ್ಲೆಂಡ್‌ನ ದತ್ತಾಂಶ ಭದ್ರತಾ ಸಮಿತಿ (ಡಿಪಿಸಿ) ಸೂಚನೆಯಂತೆ, ವಾಟ್ಸ್ಆ್ಯಪ್‌ಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ದಂಡ ವಿಧಿಸಿರುವುದಕ್ಕೆ ವಾಟ್ಸ್ಆ್ಯಪ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದೆ. ಅಲ್ಲದೆ, ವಾಟ್ಸ್ಆ್ಯಪ್ ಸದಾ ಸುರಕ್ಷಿತ ಮತ್ತು ಖಾಸಗಿತನ ಸಹಿತ ಸೇವೆಯನ್ನು ನೀಡುತ್ತದೆ ಎಂದು ಕಂಪನಿ ವಕ್ತಾರರು ಹೇಳಿದ್ದಾರೆ.

ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಯುರೋಪಿಯನ್ ರಾಷ್ಟ್ರಗಳಲ್ಲಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಐರ್ಲೆಂಡ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ.