ನವದೆಹಲಿ : ಜೂನ್ 1 ರಿಂದ 30 ರ ನಡುವೆ, 66,11,700 ವಾಟ್ಸ್ ಆಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಮತ್ತು ಇವುಗಳ ಪೈಕಿ 24,34,200 ಅಕೌಂಟ್ಗಳನ್ನು ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲೇ ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ವಾಟ್ಸ್ ಆಯಪ್ ಮಂಗಳವಾರ ತನ್ನ ಮಾಸಿಕ ಅನುಸರಣೆ ವರದಿಯಲ್ಲಿ ತಿಳಿಸಿದೆ.ಹೊಸ ಐಟಿ ನಿಯಮಗಳು-2021 ರ ಅನುಸಾರವಾಗಿ ಮೆಟಾ ಒಡೆತನದ ವಾಟ್ಸ್ ಆಯಪ್ ಜೂನ್ ತಿಂಗಳಲ್ಲಿ ಭಾರತದಲ್ಲಿ 66 ಲಕ್ಷಕ್ಕೂ ಹೆಚ್ಚು ಅಕೌಂಟ್ಗಳನ್ನು ರದ್ದುಗೊಳಿಸಿದೆ. ವಾಟ್ಸ್ ಆಯಪ್ ಜೂನ್ ತಿಂಗಳಲ್ಲಿ ಭಾರತದಲ್ಲಿ 66 ಲಕ್ಷಕ್ಕೂ ಅಧಿಕ ಅಕೌಂಟ್ಗಳನ್ನು ಬ್ಯಾನ್ ಮಾಡಿದೆ.
“ಈ ಬಳಕೆದಾರ-ಸುರಕ್ಷತಾ ವರದಿಯು ಬಳಕೆದಾರರಿಂದ ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ವಾಟ್ಸ್ ಆಯಪ್ ತೆಗೆದುಕೊಂಡ ಅನುಗುಣವಾದ ಕ್ರಮವನ್ನು ಒಳಗೊಂಡಿದೆ. ಜೊತೆಗೆ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಯನ್ನು ತಡೆಗಟ್ಟಲು ವಾಟ್ಸ್ ಆಯಪ್ನ ಆಂತರಿಕ ನಿರ್ಬಂಧ ಕ್ರಮಗಳನ್ನು ಒಳಗೊಂಡಿದೆ” ಎಂದು ಕಂಪನಿ ತಿಳಿಸಿದೆ.ದೇಶದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸ್ ಆಯಪ್ ಜೂನ್‌ನಲ್ಲಿ ದೇಶದಲ್ಲಿ ದಾಖಲೆಯ 7,893 ದೂರುಗಳನ್ನು ಸ್ವೀಕರಿಸಿದೆ ಮತ್ತು ಇವುಗಳ ಪೈಕಿ 337ರಲ್ಲಿ ಕ್ರಮ ತೆಗೆದುಕೊಂಡಿದೆ. “ಅಕೌಂಟ್ಸ್ ಆಕ್ಷನ್ಡ್” ಎಂಬುದು ವರದಿಯ ಆಧಾರದ ಮೇಲೆ ವಾಟ್ಸ್ ಆಯಪ್ ಪರಿಹಾರ ಕ್ರಮಗಳನ್ನು ತೆಗೆದುಕೊಂಡದ್ದನ್ನು ಸೂಚಿಸುತ್ತದೆ. ಕ್ರಮ ತೆಗೆದುಕೊಳ್ಳುವುದು ಎಂದರೆ ಖಾತೆಯನ್ನು ನಿಷೇಧಿಸುವುದು ಅಥವಾ ಅದರ ಪರಿಣಾಮವಾಗಿ ಈ ಹಿಂದೆ ನಿಷೇಧ ಮಾಡಲಾದ ಖಾತೆಯನ್ನು ಮರುಸ್ಥಾಪಿಸುವುದು ಎಂದರ್ಥ.
ಜೂನ್ 1 ಮತ್ತು ಜೂನ್ 30 ರ ನಡುವೆ ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ 1 ಆದೇಶ ಬಂದಿದ್ದು, ಆ 1 ಆದೇಶದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಶಕ್ತಗೊಳಿಸುವ ಪ್ರಯತ್ನದಲ್ಲಿ, ಕೇಂದ್ರವು ಇತ್ತೀಚೆಗೆ ಕುಂದುಕೊರತೆ ಮೇಲ್ಮನವಿ ಸಮಿತಿ (GAC) ಯನ್ನು ಪ್ರಾರಂಭಿಸಿದೆ.
ಹೊಸ ಸುರಕ್ಷತಾ ವೈಶಿಷ್ಟ್ಯ ಪರಿಶೀಲಿಸುತ್ತಿರುವ ವಾಟ್ಸ್ ಆಯಪ್: ಸ್ಕ್ಯಾಮರ್‌ಗಳಿಂದ ಬಳಕೆದಾರರನ್ನು ರಕ್ಷಿಸಲು, ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸಲು ಅಪರಿಚಿತ ಸಂಖ್ಯೆಗಳಿಂದ ಒಳಬರುವ ಕರೆಗಳನ್ನು ಸೈಲೆಂಟ್ ಮಾಡುವ ವೈಶಿಷ್ಟ್ಯವನ್ನು ವಾಟ್ಸ್ ಆಯಪ್ ಪರಿಶೀಲಿಸುತ್ತಿದೆ. ಸದ್ಯ ಈ ವೈಶಿಷ್ಟ್ಯವನ್ನು ಬೀಟಾ ಬಳಕೆದಾರರಿಗೆ ಪರಿಶೀಲನೆಗಾಗಿ ಬಿಡುಗಡೆ ಮಾಡಲಾಗಿದೆ. ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಇಲ್ಲದ ಅಥವಾ ನೀವು ಈ ಮೊದಲು ಮಾತನಾಡದೇ ಇರುವ ನಂಬರ್ನಿಂದ ಸಂದೇಶ ಬಂದಾಗ ಹೊಸ ‘Safety tools’ ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. ಅಜ್ಞಾತ ಸಂಖ್ಯೆಯಿಂದ ಸಂದೇಶ ಬಂದಾಗ ನೀವು ಏನು ಮಾಡಬಹುದು ಎಂಬುದನ್ನು ಅದು ತಿಳಿಸುತ್ತದೆ.ಇದು ಕಂಟೆಂಟ್ ಮತ್ತು ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅವರ ದೂರುಗಳನ್ನು ಪರಿಶೀಲಿಸುತ್ತದೆ. ಹೊಸದಾಗಿ ರಚಿಸಲಾದ ಸಮಿತಿಯು ಬೃಹತ್ ತಂತ್ರಜ್ಞಾನ ಕಂಪನಿಗಳನ್ನು ನಿಯಂತ್ರಿಸಲು ದೇಶದ ಡಿಜಿಟಲ್ ಕಾನೂನುಗಳನ್ನು ಬಲಪಡಿಸುವ ಕ್ರಮವಾಗಿದೆ. ಇದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ನಿರ್ಧಾರಗಳ ವಿರುದ್ಧ ಬಳಕೆದಾರರು ಸಲ್ಲಿಸುವ ಮನವಿಗಳನ್ನು ಪರಿಶೀಲಿಸುತ್ತದೆ.