ಬೆಂಗಳೂರು: ನೀವು ವಾಟ್ಸ್ ಆ್ಯಪ್ ತೊರೆಯಲು ಇಚ್ಛಿಸಿದ್ದರೆ ಮತ್ತು ಟೆಲಿಗ್ರಾಂ ಬಳಸಲು ಮುಂದಾಗಿದ್ದರೆ, ನಿಮ್ಮ ವಾಟ್ಸ್ ಆ್ಯಪ್ ವೈಯಕ್ತಿಕ ಚಾಟ್, ಗ್ರೂಪ್ ಚಾಟ್‌ಗಳನ್ನು ಟೆಲಿಗ್ರಾಂಗೆ ವರ್ಗಾಯಿಸಬಹುದು.
ಆ್ಯಪಲ್ ಐಫೋನ್ ಮತ್ತು ಆಂಡ್ರಾಯ್ಡ್ ಫೋನ್ ಎರಡರಲ್ಲೂ ಈ ಆಯ್ಕೆಯಿದ್ದು, ಬಳಕೆದಾರರು ವಾಟ್ಸ್ ಆ್ಯಪ್ ಚಾಟ್ ಅನ್ನು ಟೆಲಿಗ್ರಾಂಗೆ ವರ್ಗಾಯಿಸಲು ಈ ಸರಳ ವಿಧಾನ ಅನುಸರಿಸಬೇಕು.
ಐಫೋನ್ ವಾಟ್ಸ್ ಆ್ಯಪ್ ತೆರೆಯಿರಿ, ಬಳಿಕ ಅದರಲ್ಲಿ ನೀವು ಟೆಲಿಗ್ರಾಂಗೆ ವರ್ಗಾಯಿಸಬೇಕು ಎಂದುಕೊಂಡಿರುವ ಚಾಟ್ ಅಥವಾ ಗ್ರೂಪ್ ಚಾಟ್ ಆಯ್ಕೆ ಮಾಡಿ. ನಂತರ, ಕಾಂಟಾಕ್ಟ್ ಇನ್ಫೋ ಅಥವಾ ಗ್ರೂಪ್ ಇನ್ಫೋ ಮೂಲಕ ಎಕ್ಸ್‌ಪೋರ್ಟ್ ಚಾಟ್ ಸೆಲೆಕ್ಟ್ ಮಾಡಿ, ಟೆಲಿಗ್ರಾಂಗೆ ಶೇರ್ ಮಾಡಿ. ಚಾಟ್ ಎಡಕ್ಕೆ ಸ್ವೈಪ್ ಮಾಡಿದರೂ ನಿಮಗೆ ಮೋರ್ ಎಂದಿರುವಲ್ಲಿ ಎಕ್ಸ್‌ಪೋರ್ಟ್ ಚಾಟ್ ಆಯ್ಕೆ ದೊರೆಯುತ್ತದೆ.
ವಾಟ್ಸ್ ಆ್ಯಪ್ ಚಾಟ್ ತೆರೆಯಿರಿ, ಮೋರ್, ಎಕ್ಸ್‌ಪೋರ್ಟ್ ಚಾಟ್, ಶೇರ್ ಎಂದಿರುವಲ್ಲಿ ಟೆಲಿಗ್ರಾಂ ಆಯ್ಕೆ ಮಾಡಿ. ಹೀಗೆ ಮಾಡುವ ಮೂಲಕ ನಿಮ್ಮ ಗ್ರೂಪ್ ಮತ್ತು ವೈಯಕ್ತಿಕ ವಾಟ್ಸ್ ಆ್ಯಪ್ ಚಾಟ್ ಅನ್ನು ಟೆಲಿಗ್ರಾಂಗೆ ವರ್ಗಾಯಿಸಬಹುದು.












