ಹುಡುಗಿಯರು ಹುಡುಗನಿಂದ ನಿಜಕ್ಕೂ ನಿರೀಕ್ಷೆ ಮಾಡೋದೇನು ? ನಿಮ್ಮ ಪ್ರೀತಿಯ ಹುಡುಗಿಗೆ ನೀವೇನ್ ಕೊಡ್ಬೇಕು?

ಹುಡುಗಿಯರು ಸಾಮಾನ್ಯವಾಗಿ ಇಷ್ಟಪಡೋದು ಅವಳಿಗಿಂತಾ ಅವಳನ್ನು ಹೆಚ್ಚು ಇಷ್ಟಪಡೋ ಹುಡುಗರನ್ನ. ಪರಿಶುದ್ಧ ಪ್ರೀತಿಯನ್ನು ನೀಡಿ ಪ್ರೀತಿ ಗಳಿಸಬಹುದು.ನಿಮ್ಮ ಮಾತಿನಂತೆಯೇ ನಿಮ್ಮ ನಡೆಯಿದ್ದರೆ ಚೆನ್ನ. ನೀವು ಹೇಳುವುದೊಂದು ಮಾಡುವುದೊಂದು ಆದರೆ ಯಾರೂ ನಿಮ್ಮತ್ತ ಆಕರ್ಷಿತರಾಗುವುದಿಲ್ಲ. ಹಾಗಾಗಿ ನಿಮ್ಮ ನಡೆ ನುಡಿ ಒಂದೇ ಆಗಿರಲಿ.

ಸುಮ್ಮನೆ ಸೋಮಾರಿಯ ಹಾಗೆ ಕಾಲ‌ ಕಳೆಯುವ ಹುಡುಗರನ್ನು ಹುಡುಗಿಯರು ಖಂಡಿತಾ ಇಷ್ಟಪಡುವುದಿಲ್ಲ. ಕೆಲಸ ಸಣ್ಣದೇ ಆದರೂ ನೀವು ಕಷ್ಟಪಟ್ಟು ದುಡಿದು, ದುಂದುವೆಚ್ಚ ಮಾಡದೇ, ಯಾವುದೇ ಚಟಗಳಿಗೆ ದಾಸರಾಗದೇ ಇದ್ದರೆ ಅದರಷ್ಟು ಖುಷಿ ಹುಡುಗಿಯರಿಗೆ ಮತ್ತೊಂದಿಲ್ಲ.