ಪಿಯುಸಿ ನಂತರ ಮುಂದೇನು? ಇಲ್ಲಿದೆ ಹಲವಾರು ಹೊಸ ಹೊಸ ಇಂಟೆರೆಸ್ಟಿಂಗ್ ಕೋರ್ಸ್ ಗಳು

ವಿಜ್ಞಾನ ವಿಷಯದಲ್ಲಿ ಮುಂದುವರೆಯುವ ಇಚ್ಛೆ ಇದ್ದಲ್ಲಿ,

  • ಇಂಜಿನಿಯರಿಂಗ್
  • ವೈದ್ಯಕೀಯ
  • ಬಿ.ಎಸ್ ಸಿ
  • ಕೃಷಿ ವಿಜ್ಞಾನ
  • ಫಾರ್ಮಸಿ
  • ನರ್ಸಿಂಗ್
  • ವಾಸ್ತು ಶಿಲ್ಪ
  • ಪ್ಯಾರಾ ಮೆಡಿಕಲ್ ಕೋರ್ಸ್ ಗಳು

ಇದಲ್ಲದೇ ಏವಿಯೇಷನ್‌ನಲ್ಲಿ ಸೌಂಡ್ ಇಂಜಿನಿಯರಿಂಗ್, ಬಯೋಮೆಡಿಕಲ್ ವೃತ್ತಿಗಳು, ಓಸಿಯೋನೋಗ್ರಫಿ, ಬಯೋಕೆಮಿಸ್ಟ್ರಿ, ಫೋರೆನ್ಸಿಕ್ ಸೈನ್ಸ್, ಸೆಲ್ ಥೆರಪಿ, ಜೆನೆಟಿಕ್ ಎಂಜಿನಿಯರಿಂಗ್, ಏರೋಸ್ಪೇಸ್ ಎಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಂತಹಾ ಹತ್ತು ಹಲವು ಕೋರ್ಸ್ ಗಳು ಲಭ್ಯವಿದೆ.

ಕಾಮರ್ಸ್ ಕ್ಷೇತ್ರದಲ್ಲಿ ಮುಂದುವರೆಯುವವರಿಗೆ,

  • ಬಿ.ಕಾಂ.
  • ಬಿಬಿಎ, ಬಿಬಿಎಂ
  • ಸಿಎ, ಸಿಎಸ್, ಸಿಎಂಎ
  • ಬ್ಯಾಂಕಿಂಗ್ ಮತ್ತು ಫೈನಾನ್ಸ್
  • ಹೋಟೆಲ್ ಮ್ಯಾನೇಜ್ಮೆಂಟ್
  • ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್

ಕಲಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ

  • ಬಿಎ
  • ಪತ್ರಿಕೋದ್ಯಮ
  • ಕಾನೂನು ಪದವಿ
  • ಮನಃಶ್ಶಾಸ್ತ್ರ
  • ಸಮಾಜ ಕಾರ್ಯ, ಬಿಎಸ್ ಡಬ್ಲ್ಯೂ
  • ಲಲಿತಕಲೆ, ಬಿಎಫ್ ಎ
  • ಬಿ.ಎಡ್
  • ಭಾಷಾಶಾಸ್ತ್ರ
  • ತತ್ತ್ವಜ್ಞಾನ
  • ಗೃಹ ವಿಜ್ಞಾನ

ಮಾತ್ರವಲ್ಲದೇ ಫ್ಯಾಶನ್ ಡಿಸೈನಿಂಗ್, ಹೋಟೆಲ್ ಮ್ಯಾನೇಜ್‌ಮೆಂಟ್, ಪ್ರಾಡಕ್ಟ್ ಡಿಸೈನ್, ಶೂ ಡಿಸೈನ್, ಎಥ್ನೋಗ್ರಫಿ, ಬೇಕರಿ ಮತ್ತು ಸ್ವೀಟ್ಸ್, ಲೆದರ್ ಡಿಸೈನಿಂಗ್ ಮತ್ತು ಗ್ರಾಫಾಲಜಿಯಂತಹ ವೃತ್ತಿಗಳನ್ನು ಪರಿಗಣಿಸಬಹುದು.

ಇದಲ್ಲದೇ ಇನ್ನೂ ಹತ್ತು ಹಲವು ಕೋರ್ಸ್ ಗಳು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಲಭ್ಯವಿರುತ್ತದೆ. ನಮ್ಮ ಆಸಕ್ತಿದಾಯಕ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು, ಕಾಲೇಜು ಹಾಗೂ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಆದಷ್ಟು ವೃತ್ತಿಪರವಾಗಿ ಪದವಿ ದಿನಗಳಲ್ಲೇ ಅಭ್ಯಾಸ ಮಾಡಿದರೆ ಉದ್ಯೋಗವನ್ನರಸುವುದಕ್ಕೆ ಪೂರಕವಾಗುತ್ತದೆ.

ಒಂದು ನೆನಪಿಡಿ

ಯಾರನ್ನೂ ಯಾವುದೇ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಒತ್ತಾಯ ಮಾಡಬೇಡಿ ಅಥವಾ ಯಾರದೋ ಒತ್ತಾಯಕ್ಕೆ ನಿಮ್ಮ ಆಸಕ್ತಿ ಇಲ್ಲದ ಕ್ಷೇತ್ರಕ್ಕೆ ಖಂಡಿತಾ ಕಾಲಿಡಬೇಡಿ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯ.