ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : 2019ರಲ್ಲಿ ಅಬುಧಾಬಿಯಲ್ಲಿ ನಡೆದ ಟಿ10 ಟೂರ್ನಿಯಲ್ಲಿ ಕರ್ನಾಟಕ ಟಸ್ಕರ್ಸ್ ತಂಡವನ್ನ ಪ್ರತಿನಿಧಿಸಿದ್ದರು. ನಾಲ್ಕು ಅಪರಾಧಗಳಿಗಾಗಿ ಅವರು ತಪ್ಪಿತಸ್ಥರು ಎಂದು ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ. “ಸೆಪ್ಟೆಂಬರ್ 2021 ರಲ್ಲಿ ಐಸಿಸಿಯಿಂದ (ಇಸಿಬಿ ಸಂಹಿತೆಯಡಿ ನಿಯೋಜಿತ ಭ್ರಷ್ಟಾಚಾರ ವಿರೋಧಿ ಅಧಿಕಾರಿಯಾಗಿ) ಆರೋಪ ಹೊರಿಸಲ್ಪಟ್ಟ ಸ್ಯಾಮ್ಯುಯೆಲ್ಸ್ ಈ ವರ್ಷದ ಆಗಸ್ಟ್ನಲ್ಲಿ ನಾಲ್ಕು ಅಪರಾಧಗಳಲ್ಲಿ ತಪ್ಪಿತಸ್ಥರೆಂದು ನ್ಯಾಯಮಂಡಳಿಯಿಂದ ಸಾಬೀತಾಗಿದೆ. ಸೆಪ್ಟೆಂಬರ್ 2021ರಲ್ಲಿ ಐಸಿಸಿ ಈ ಆಟಗಾರನ ವಿರುದ್ಧ ನಾಲ್ಕು ಆರೋಪಗಳನ್ನ ಹೊರಿಸಿದ್ದು, ಈ ವರ್ಷದ ಆಗಸ್ಟ್ನಲ್ಲಿ ಟಿಜಿಇ ನ್ಯಾಯಮಂಡಳಿ ಅವರನ್ನ ತಪ್ಪಿತಸ್ಥರೆಂದು ಘೋಷಿಸಿತು. ಇನ್ನು ಈ ನಿಷೇಧವು ನವೆಂಬರ್ 11, 2023 ರಿಂದ ಜಾರಿಯಾಗಿದೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ (ECB) ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನ ಉಲ್ಲಂಘಿಸಿದ ಆರೋಪದ ಮೇಲೆ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಮರ್ಲಾನ್ ಸ್ಯಾಮುಯೆಲ್ಸ್ ಅವರನ್ನ ಆರು ವರ್ಷಗಳ ಕಾಲ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿಷೇಧಿಸಲಾಗಿದೆ.