ಡೊಮಿನಿಕಾ: ಈ ಟೆಸ್ಟ್ ಪಂದ್ಯದಲ್ಲಿ ಕಿರ್ಕ್ ಮೆಕೆಂಜಿ ಅವರು ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ರಹಕೀಮ್ ಕಾರ್ನ್ವಾಲ್ ಮತ್ತು ಜೋಮೆಲ್ ವಾರಿಕಾನ್ ಅವರನ್ನು ಭಾರತದ ವಿರುದ್ಧ ಸ್ಪಿನ್ ಆಸ್ತ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಕೊನೆಯ ಟೆಸ್ಟ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಅಲಿಕ್ ಅಥಾನಾಜ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.ಎಡಗೈ ಬ್ಯಾಟ್ಸ್ಮನ್ ಕಿರ್ಕ್ ಮೆಕೆಂಜಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ನ 13 ಆಟಗಾರರ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ. ಜುಲೈ 12 ರಿಂದ ಡೊಮಿನಿಕಾದಲ್ಲಿ ಮೊದಲ ಟೆಸ್ಟ್ನಲ್ಲಿ ನಡೆಯಲಿದೆ.ಭಾರತ ತಂಡದ ವಿರುದ್ಧದ ಮೊದಲ ಟೆಸ್ಟ್ಗೆ ಕೆರಿಬಿಯನ್ ಕ್ರಿಕೆಟ್ ಮಂಡಳಿ ತಂಡ ಪ್ರಕಟಿಸಿದೆ.
ಆಯ್ಕೆದಾರರು ಮೊದಲ ಟೆಸ್ಟ್ಗೆ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಟೆವಿನ್ ಇಮ್ಲಾಚ್ ಮತ್ತು ಬಲಗೈ ವೇಗಿ ಅಕೀಮ್ ಜೋರ್ಡಾನ್ ಅವರನ್ನು ಮೀಸಲು ಆಟಗಾರರಾಗಿ ಪ್ರಕಟಿಸಿದ್ದಾರೆ. ಶಾನನ್ ಗೇಬ್ರಿಯಲ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್ ಮತ್ತು ಜೇಸನ್ ಹೋಲ್ಡರ್ ವೇಗದ ಬೌಲಿಂಗ್ ನಿರ್ವಹಿಸಲಿದ್ದಾರೆ. ಆಲ್ ರೌಂಡರ್ ಸ್ಥಾನವನ್ನು ರೇಮನ್ ರೈಫರ್ ವಹಿಸಿಕೊಳ್ಳಲಿದ್ದಾರೆ.
ಗುಡಾಕೇಶ್ ಮೋತಿ ಕೆಳ ಬೆನ್ನಿನ ಗಾಯದಿಂದ ಬಳಲುತ್ತಿದ್ದಾರೆ ಮತ್ತು ಪುನರ್ವಸತಿಗೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಇಬ್ಬರು ಸ್ಪಿನ್ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕೈಲ್ ಮೇಯರ್ಸ್ ಮತ್ತು ವೇಗದ ಬೌಲರ್ ಜೇಡನ್ ಸೀಲ್ಸ್ ತಮ್ಮ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ, ಆಡುವುದರಿಂದ ಮತ್ತೆ ಗಾಯಕ್ಕೆ ತುತ್ತಾಗುವ ಸಂಭವ ಇರುವುದರಿಂದ ಆಯ್ಕೆ ಸಮಿತಿ ಅವರನ್ನೂ ಕೈ ಬಿಟ್ಟಿದೆ..
ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ 2023-25ರ ಸರಣಿಯಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತಕ್ಕೆ ಮೊದಲನೆ ಪಂದ್ಯವಾಗಿದೆ. ವೆಸ್ಟ್ ಇಂಡೀಸ್ ಕಳೆದ ವರ್ಷ ಒಂಬತ್ತು ತಂಡಗಳಲ್ಲಿ ಎಂಟನೇ ಸ್ಥಾನ ಗಳಿಸಿತ್ತು ಮತ್ತು ಅವರ 13 ಪಂದ್ಯಗಳಲ್ಲಿ ನಾಲ್ಕರಲ್ಲಿ ಮಾತ್ರ ಜಯ ಸಾಧಿಸಿದ್ದರು.ಮೊದಲ ಟೆಸ್ಟ್ ಜುಲೈ 12 ರಿಂದ 16 ರವರೆಗೆ ಡೊಮಿನಿಕಾದಲ್ಲಿ ಮತ್ತು ಎರಡನೇ ಟೆಸ್ಟ್ ಜುಲೈ 20 ರಿಂದ ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆಯಲಿದೆ. ಇದಾದ ಬಳಿಕ ಉಭಯ ತಂಡಗಳು ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳನ್ನು ಆಡಲಿವೆ.
ಮೊದಲ ಟೆಸ್ಟ್ಗೆ ವೆಸ್ಟ್ ಇಂಡೀಸ್ ತಂಡ: ಕ್ರೈಗ್ ಬ್ರಾಥ್ವೈಟ್ (ನಾಯಕ), ಜೆರ್ಮೈನ್ ಬ್ಲಾಕ್ವುಡ್ (ಉಪನಾಯಕ), ಅಲಿಕ್ ಅಥಾನಾಜೆ, ಟೆಗೆನರ್ ಚಂದ್ರಪಾಲ್, ರಹಕೀಮ್ ಕಾರ್ನ್ವಾಲ್, ಜೋಶುವಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ರೇಮನ್ ವಾರ್ರಿಕನ್ ರೀಫರ್, ಜೊಮೆಲ್ ವಾರ್ರಿಕನ್ ರೀಫರ್, ಕೆಮರ್ರಿಕನ್ ರೀಫರ್
ಕೆರಿಬಿಯನ್ ಕ್ರಿಕೆಟ್ ಮಂಡಳಿ ಮುಖ್ಯ ಆಯ್ಕೆಗಾರ ಡೆಸ್ಮಂಡ್ ಹೇನ್ಸ್ ಅವರು ಆಯ್ಕೆ ಬಗ್ಗೆ ಮಾತನಾಡಿದ್ದು, ನಾವು ಇಲ್ಲಿನ ಶಿಬಿರದಲ್ಲಿ ಜೇಡನ್ ಸೀಲ್ಸ್ ಹೊಂದಿದ್ದೇವೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಅವರ ಪುನರ್ವಸತಿ ಸಮಯದಲ್ಲಿ ಅವರು ಉತ್ತಮ ಪ್ರಗತಿ ಸಾಧಿಸಿದ್ದಾರೆ. ಅವರನ್ನು ಆತುರವಾಗಿ ಮೈದಾನಕ್ಕಿಳಿಸಲು ನಾವು ಸಿದ್ಧರಲ್ಲ ಸಂಪೂರ್ಣ ಗುಣ ಮುಖರಾದ ಬಳಿಕ ಆಡಿಸುತ್ತೇವೆ. ಕೈಲ್ ಮೇಯರ್ಸ್ ಸಹ ಗಾಯದಿಂದ ಚೇತರಿಸಿಕೋಳ್ಳುತ್ತಿದ್ದಾರೆ. ನಾವು ಮೋತಿ ಇಲ್ಲದೇ ಮೊದಲ ಟೆಸ್ಟ್ ಆಡುತ್ತೇವೆ. ಅವರು ಪುನರ್ವಸತಿ ಪಡೆಯುತ್ತಿದ್ದಾರೆ ಮತ್ತು ಇದು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ರಹಕೀಮ್ ಕಾರ್ನ್ವಾಲ್ ಮತ್ತು ಜೋಮೆಲ್ ವಾರಿಕಾನ್ಗೆ ಅವಕಾಶವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ