ಬೆಂಗಳೂರು: ಉಡುಪಿ ಶ್ರೀ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರ ಶಿಷ್ಯೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಪುತ್ರಿ ವಾಙ್ಮಯಿ ಮತ್ತು ಪ್ರತೀಕ್ ಇವರ ವಿವಾಹ ಬೆಂಗಳೂರಿನ ಟ್ಯಾಮರಿಂಡ್ ಟ್ರೀ ನಲ್ಲಿ ಜೂನ್ 7 ರಂದು ನೆರವೇರಿತು.
ಕೌಟುಂಬಿಕ ಸದಸ್ಯರು ಮಾತ್ರ ಹಾಜರಿದ್ದ ಈ ಸಮಾರಂಭದಲ್ಲಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಈಶಪ್ರಿಯ ತೀರ್ಥ ಶ್ರೀಪಾದರು ವಧೂ ವರರಿಗೆ ಹರಸಿ ಕಳುಹಿಸಿದ ಮಧುಪರ್ಕ, ಸೀರೆ, ಶಾಲು, ಗಂಧ ಪ್ರಸಾದವನ್ನು ಮತ್ತು ಶ್ರೀಕೃಷ್ಣನಿಗೆ ತೊಡಿಸಿದ ರೆಂಜದ ಹಾರಗಳನ್ನುಮಠದ ವ್ಯವಸ್ಥಾಪಕ ಗೋವಿಂದ ರಾಜ ಹಾಗೂ ಶಿಷ್ಯರು ಮಂತ್ರಘೋಷದ ಮೂಲಕ ನೀಡಿದರು.
ಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹಿಸಿ ಕಳುಹಿಸಿದ ಉಡುಪಿ ಸೀರೆಯನ್ನು ಮಾನ್ಯ ಶ್ರೀಮತಿ ನಿರ್ಮಲ ಸೀತಾರಾಮನ್ ಅವರಿಗೆ ನೀಡಲಾಯಿತು.