“ವಿ ದ ಪೀಪಲ್ ಆಫ್ ಇಂಡಿಯಾ” ನಾಟಕ ಪ್ರದರ್ಶನ

ಬ್ರಹ್ಮಾವರ: “ಮಂದಾರ” ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಹಾಗೂ  ದಿಮ್ಸಾಲ್ ನಾಟಕ ಶಾಲೆ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಆಯೋಜನೆಗೊಂಡ ರಂಗಾಯಣ ಶಿವಮೊಗ್ಗ ಇವರ “ವಿ ದ‌‌ ಪೀಪಲ್ ಆಫ್ ಇಂಡಿಯ” ನಾಟಕವು ಫೆ.26 ರಂದು ಎಸ್.ಎಮ್.ಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಪ್ರದರ್ಶನಗೊಂಡಿತು.

ಬ್ರಹ್ಮಾವರ ತಾಲೂಕಿನ ತಹಶೀಲ್ದಾರರಾದ‌ ರಾಜಶೇಖರ್ ಮೂರ್ತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು “ಎರಡುವರೆ ಸಾವಿರ ವರ್ಷಗಳಿಂದ ನಾವು ಜಾತಿ, ಧರ್ಮ, ಭಾಷಾ ವ್ಯಕ್ತಿ, ಪ್ರಾದೇಶಿಕ ವ್ಯಕ್ತಿಗಳಾಗಿ ಬದುಕಿದ್ದೀವಿ  ಇದೆಲ್ಲವನ್ನೂ ಮೀರಿ ‘ವಿ ದಿ ಪೀಪಲ್ ಆಪ್ ಇಂಡಿಯಾ’ ನಾವೆಲ್ಲರೂ ಭಾರತೀಯರು ಎಂಬ ತತ್ವದಡಿಯಲ್ಲಿ ಬದುಕುದನ್ನು ಕಲಿಯಬೇಕಿದೆ. ಹಾಗೆ ಬದುಕಲು ಕಲಿತ ದಿನ ಭಾರತ ಜಗತ್ತಿನಲ್ಲಿ ಸರ್ವಶ್ರೇಷ್ಟ ದೇಶವಾಗಿ ಹೊರ ಹೊಮ್ಮಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಎಮ್.ಎಸ್ ಶಾಲೆಯ ಪ್ರಾಂಶುಪಾಲರಾದ ಐವನ್ ಡೊನಾತ್ ಸುವಾರಿಸ್ ಅವರು ನಾಟಕ ಪ್ರದರ್ಶನಕ್ಕೆ ಶುಭ ಹಾರೈಸಿದರು.

ದಿಮ್ಸಾಲ್ ನಾಟಕ ಶಾಲೆಯ ಮುಖ್ಯಸ್ಥರಾದ ಅಭಿಲಾಷಾ ಹಂದೆ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮಂದಾರ ತಂಡದ ಸದಸ್ಯರು ರಂಗಗೀತೆಗಳನ್ನು ಹಾಡಿದರು. ಬಳಿಕ ರಂಗಾಯಣ ಶಿವಮೊಗ್ಗ ಇವರಿಂದ “ವಿ ದ ಪೀಪಲ್ ಆಫ್ ಇಂಡಿಯ” ನಾಟಕ ಪ್ರದರ್ಶನಗೊಂಡಿತು.

ಮಂದಾರದ ನಿರ್ದೇಶಕ ರೋಹಿತ್ ಎಸ್ ಬೈಕಾಡಿ ಕಾರ್ಯಕ್ರಮ ನಿರೂಪಿಸಿ, ಸಚಿನ್ ಅಂಕೋಲ ವಂದಿಸಿದರು.