ಮೋಸ ಹೋಗ್ಬೇಡಿ, ಕಲರ್ ಫುಲ್ ಕಲ್ಲಗಂಡಿ ಬಂದಿದೆ : ನೀವು ಖರೀದಿಸುವ ಕಲ್ಲಂಗಡಿ ಹೇಗಿರಬೇಕು?

ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಹಣ್ಣುಗಳು ಈಗ ಆರೋಗ್ಯಕರವಾಗಿ ಉಳಿದಿಲ್ಲ, ಎಷ್ಟೋ ಹಣ್ಣುಗಳನ್ನು ರಾಸಾಯನಿಕ ಹಾಕಿಯೇ ಹಣ್ಣು ಮಾಡಲಾಗುತ್ತದೆ. ನೈಸರ್ಗಿಕವಾಗಿ ಬೆಳೆಸಿ ಹಣ್ಣಾದ ನಂತರ ಮಾರುವ ಬೆಳೆಗಾರರು ಕಡಿಮೆಯಾಗಿದ್ದಾರೆ. ಇದೀಗ ಮತ್ತೆ ಬೇಸಿಗೆ ಆವರಿಸಿದೆ, ಬೇಸಿಗೆಯ ದಾಹ ನೀಗಿಸಲು ಕಲ್ಲಂಗಡಿ ಹಣ್ಣು ಪೂರಕ. ಆದರೆ ಮಾರುಕಟ್ಟೆಯಲ್ಲಿ ಹೊಳೆಯುವ ಕಲ್ಲಂಗಡಿಗಳು ಬಂದಿದ್ದು ರಾಸಾಯನಿಕ ಹಣ್ಣಾವುದು? ನೈಸರ್ಗಿಕ ಹಣ್ಣು ಯಾವುದು ಎಂದು ಗೊತ್ತಾಗದ ಸ್ಥಿತಿ ಇದೆ.

ಹಣ್ಣನ್ನು ಕತ್ತರಿಸಿದಾಗ ಒಳಭಾಗದ ಪದರ ಕೃತಕ ಕೆಂಪು ಬಣ್ಣದಲ್ಲಿದ್ದರೆ, ಆ ಹಣ್ಣಿಗೆ ಕೆಮಿಕಲ್ ಬಣ್ಣ ಬಳಸಲಾಗಿದೆ ಎಂದು ಅರ್ಥ. ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಒಳಪದರವು ನೈಸರ್ಗಿಕವಾಗಿ ಕೆಂಪು ಬಣ್ಣ ಹೊಂದಿರುತ್ತದೆ, ಆದರೆ ಅದು ಕೃತಕ ಬಣ್ಣದಷ್ಟು ಗಾಢವಾಗಿರುವುದಿಲ್ಲ. ಕೆಲವೊಮ್ಮೆ ಬಿಳಿ ಬಣ್ಣವೂ ಕಾಣಿಸಬಹುದು ಎನ್ನುತ್ತದೆ ಆಹಾರ ಇಲಾಖೆ.

ನೈಸರ್ಗಿಕ ಹಣ್ಣನ್ನು ನೀವೇ ಗುರುತಿಸಿ:

ಹಣ್ಣಿನ ಕೆಳಭಾಗವನ್ನು ಒಮ್ಮೆ ಗಮನಿಸಿ ನೋಡಿ: 

ಹಣ್ಣಿನ ಕೆಳ ಭಾಗವು ನೈಸರ್ಗಿಕವಾಗಿ ತಿಳಿ ಹಳದಿ ಬಣ್ಣದ್ದಾಗಿರುತ್ತದೆ. ಇದನ್ನು ಹೊರತುಪಡಿಸಿ ಇಡೀ ಕಲ್ಲಂಗಡಿ ಹಣ್ಣು ಒಂದೇ ಬಣ್ಣದ್ದಲ್ಲಿದೆಯೇ ಗಮನಿಸಿ ಹಾಗಿದ್ದರೆ, ಇದಕ್ಕೆ ಕೃತಕ ಬಣ್ಣವನ್ನು ಬೆರೆಸಿರಬಹುದು ಎಂದು ಅರ್ಥ.

ನೀರಿನಲ್ಲಿ ಬೆರೆಸಿ: ಒಂದು ಸಣ್ಣ ಪೀಸ್ ಕಲ್ಲಂಗಡಿ ಹಣ್ಣನ್ನು ತುಂಡು ಮಾಡಿ, ನೀರಿನಲ್ಲಿ ಬೆರೆಸಿಡಿ, ಆಗ ನೀರು ಗುಲಾಬಿ ಬಣ್ಣಕ್ಕೆ ತಿರುಗಿದರೆ, ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಸೇರಿಸಲಾಗಿದೆ ಎಂದರ್ಥ ಇದನ್ನು ಪರೀಕ್ಷಿಸೋದು ಸುಲಭ.

ನೈಸರ್ಗಿಕವಾಗಿ ಬೆಳೆಸಿದ ಕಲ್ಲಂಗಡಿ ಹಣ್ಣಿನ ಬೀಜಗಳು ಕಂದು ಮತ್ತು ಕಪ್ಪು ಬಣ್ಣ ಹೊಂದಿರುತ್ತೆ. ಇಂತಹ ಕಲ್ಲಂಗಡಿಯ ಒಳಭಾಗದ ಬಣ್ಣವು ಕೆಂಪು ಬಣ್ಣದ್ದರುತ್ತದೆ. ಆದರೆ ಇದು ಕೃತಕವಾಗಿ ಕಾಣುವುದಿಲ್ಲ ಮತ್ತು ಬಣ್ಣ ಗಾಢ ಕೆಂಪುಬಣ್ಣ ಹೊಂದಿರುವುದಿಲ್ಲ. ಕೃತಕ ಕಲ್ಲಂಗಡಿ ಹಣ್ಣಿನ ಬೀಜಗಳು ಬಿಳಿ ಬಣ್ಣದಲ್ಲಿರುತ್ತವೆ. ಇವು ಒಳಗಿನಿಂದ ಗಾಢ ಕೆಂಪು ಬಣ್ಣದಲ್ಲಿ ಕಾಣುತ್ತವೆ. ಆದರೆ ಕೆಲವೊಮ್ಮೆ ಕೈಗಳಿಗೆ ಈ ಬಣ್ಣ ತಾಗುತ್ತದೆ, ಕಲೆಯಾಗುತ್ತದೆ

ಇನ್ನು ಮುಂದೆ ಕಲ್ಲಂಗಡಿ ಹಣ್ಣನ್ನು ಪರಿಶೀಲಿಸಿ ಖರೀದಿಸಿ.