ಮಂಗಳೂರು: ಯುನೈಟೆಡ್ ಟೊಯೋಟಾದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಸೆ.16 ರಂದು ನೇರ ಸಂದರ್ಶನ

ಮಂಗಳೂರು: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಯುನೈಟೆಡ್ ಟೊಯೋಟಾ, ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಯುನೈಟೆಡ್ ಟೊಯೋಟಾದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಸೆ.16 ಶನಿವಾರದಂದು ಬೆಳಿಗ್ಗೆ 10.30 ರಿಂದ ಅಪರಾಹ್ನ 1.30ರವರೆಗೆ ಯಾವುದೇ ಪದವಿ, ಐ.ಟಿ.ಐ ಮೋಟಾರ್ ಮೆಕ್ಯಾನಿಕ್ ಅಥವಾ ಡಿಪ್ಲೋಮಾ ಆಟೋಮೊಬೈಲ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಭಾಗ್, ಮಂಗಳೂರು ಇಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿರುತ್ತದೆ ಎಂದು ಪಕಟಣೆ ತಿಳಿಸಿದೆ. ಕೆಲಸದ ಸ್ಥಳ: ಮಂಗಳೂರು, ಪುತ್ತೂರು, ಉಡುಪಿ ಮತ್ತು ಕುಂದಾಪುರ.