ಮಂಗಳೂರು: ವಿಟಿಯು ರಾಜ್ಯ ಮಟ್ಟದ ಅಂತರಕಾಲೇಜು ಫುಟ್‌ಬಾಲ್ ಪಂದ್ಯಾವಳಿ ಸಮಾರೋಪ ಸಮಾರಂಭ

ಮಂಗಳೂರು: ವಿಟಿಯು ರಾಜ್ಯ ಮಟ್ಟದ ಅಂತರಕಾಲೇಜು ಫುಟ್‌ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ಆಗಸ್ಟ್ 27 ರಂದು ಮಂಗಳೂರಿನ PACE ಕ್ಯಾಂಪಸ್‌ನಲ್ಲಿ ನಡೆಯಿತು. PACE ವಿದ್ಯಾರ್ಥಿ ಅನ್ಸಾರ್ ವಿಟಿಯು ರಾಜ್ಯ ಮಟ್ಟದ ಅಂತರಕಾಲೇಜು ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು.

PACE ನ ಪ್ರಾಂಶುಪಾಲ ಡಾ. ರಮೀಸ್ ಎಂ.ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಯಾಸೀನ್, (ಮಾಜಿ ರಾಜ್ಯ ಮಟ್ಟದ ಆಟಗಾರ ಅಲ್ ಅಮೀನ್ ಕಾಲೇಜು ಬೆಂಗಳೂರು), ಪ್ರೊ. ಜಹೀರ್, (ಸಿವಿಲ್ ಇಂಜಿನಿಯರಿಂಗ್ ವಿಭಾಗ, ಬಿಐಟಿ, ಮಂಗಳೂರು),ಡಾ. ಕಿರಣ್ ಕುಮಾರ್ (MSRIT, ಬೆಂಗಳೂರು ದೈಹಿಕ ಶಿಕ್ಷಣ ನಿರ್ದೇಶಕ), ಡಾ. ಇಕ್ಬಾಲ್ (ದೈಹಿಕ ಶಿಕ್ಷಣ ನಿರ್ದೇಶಕ PACE, ಮಂಗಳೂರು),ಸುಂದರ್ (ದೈಹಿಕ ಶಿಕ್ಷಣ ಇಲಾಖೆ, PACE, ಮಂಗಳೂರು), ಮತ್ತು ಇಬ್ರಾಹಿಂ (ಫುಟ್‌ಬಾಲ್ ಕೋಚ್, PACE ಮಂಗಳೂರು) ಭಾಗವಹಿಸಿದರು.

NMIT ಬೆಂಗಳೂರು ಪಂದ್ಯಾವಳಿಯ ವಿಜೇತರಾಗಿ ಹೊರಹೊಮ್ಮಿತು, NMAMIT ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿತು. MSRIT ಮೂರನೇ ಸ್ಥಾನ ಗಳಿಸಿದರೆ PACE ನಾಲ್ಕನೇ ಸ್ಥಾನ ಗಳಿಸಿತು.

NMIT ಬೆಂಗಳೂರಿನ ಅಹ್ಮದ್ ವಾಣಿ ಅತ್ಯುತ್ತಮ ಆಟಗಾರ ಮತ್ತು NMIT ಯ ಬಿಸ್ವಾಸ್, ಅತ್ಯುತ್ತಮ ಗೋಲ್‌ಕೀಪರ್ ಎಂದು ಗೌರವಿಸಲ್ಪಟ್ಟರು.