ಮೊಗವೀರ ಯುವ ಸಂಘಟನೆ ವತಿಯಿಂದ ಹಿರಿಯಡಕ ದಲ್ಲಿ ಜುಲೈ 26ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ

ಹಿರಿಯಡಕ: ಮೊಗವೀರ ಯುವ ಸಂಘಟನೆ (ರಿ), ಉಡುಪಿ ಜಿಲ್ಲೆ, ಹಿರಿಯಡಕ ಘಟಕದ ವತಿಯಿಂದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಅಂಬಲಪಾಡಿ, ಉಡುಪಿ ಜಿಲ್ಲಾಡಳಿತ, ಉಡುಪಿ ಗೆಳೆಯರ ಬಳಗ (ರಿ.) ಪೆರ್ಡೂರು, ರಕ್ತನಿಧಿ ವಿಭಾಗ ಹಾಗೂ ಕೆ.ಎಂ.ಸಿ. ಮಣಿಪಾಲ ಇವರ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

“ರಕ್ತದಾನ ಜೀವದಾನ” ಎಂಬ ಧ್ಯೇಯದೊಂದಿಗೆ ನಡೆಯಲಿರುವ ಈ ಶಿಬಿರವು ಜುಲೈ 26, 2026 (ಭಾನುವಾರ) ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ನಡೆಯಲಿದೆ.

ಶಿಬಿರವು ಹಿರಿಯಡಕ ಪೊಲೀಸ್ ಠಾಣೆ ಸಮೀಪದ ಮಾಧವ ಮಂಗಲ ಸಭಾಭವನದಲ್ಲಿ ನಡೆಯಲಿದ್ದು, ಆರೋಗ್ಯವಂತ ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.