ಮಾಸ್ಕೋ: ದಾಖಲೆಯ 5ನೇ ಬಾರಿಗೆ ರಷ್ಯಾದ ಅಧ್ಯಕ್ಷರಾಗಿ (Russian President) ವ್ಲಾಡಿಮಿರ್ ಪುಟಿನ್ (Vladimir Putin) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕ್ರೆಮ್ಲಿನ್ನಲ್ಲಿ ನಡೆದ ಸಮಾರಂಭದಲ್ಲಿ ಪುಟಿನ್ ಪ್ರಮಾಣ ವಚನ ಸ್ವೀಕರಿಸಿದರು. ಅವರು ಮುಂದಿನ 6 ವರ್ಷಗಳ ಅವಧಿಗೆ ರಷ್ಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
1999ರಿಂದ ಪುಟಿನ್ ರಷ್ಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸಿ ಯುನೈಟೆಡ್ ಸ್ಟೇಟ್ಸ್ ಹಾಗೂ ಹಲವು ಪಶ್ಚಿಮಾತ್ಯ ದೇಶಗಳು ಈ ಸಮಾರಂಭವನ್ನು ಬಹಿಷ್ಕರಿಸಿತ್ತು.
ಕಳೆದ ಮಾರ್ಚ್ 15ರಿಂದ 17ರವರೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ 71 ವರ್ಷ ವಯಸ್ಸಿನ ಪುಟಿನ್ ಗೆಲುವು ಸಾಧಿಸಿದ್ದರು. ಚಲಾವಣೆಗೊಂಡ ಒಟ್ಟು ಮತಗಳಲ್ಲಿ ಪುಟಿನ್ ಶೇ 87.34 ರಷ್ಟು ಮತಗಳನ್ನು ಪಡೆದ್ದಿದ್ದರು. ಈ ಹಿಂದೆ 2004ರಲ್ಲಿ 71.31 ಶೇಕಡಾ, 2012 ರಲ್ಲಿ 63.6 ಶೇಕಡಾ ಮತ್ತು 2018 ರಲ್ಲಿ 76.7 ಶೇಕಡಾ ಮತಗಳನ್ನು ಪುಟಿನ್ ಪಡೆದಿದ್ದರು.