ಜ 24 ರಂದು ಪುತ್ತಿಗೆ ಪರ್ಯಾಯ ಸಮಾರೋಪದಲ್ಲಿ ಕುದ್ರೋಳಿ ಗಣೇಶ್ ತಂಡದಿಂದ ವಿಸ್ಮಯ ಜಾದೂ ಪ್ರದರ್ಶನ

ಉಡುಪಿ: ಪುತ್ತಿಗೆ ಪರ್ಯಾಯ ಮಹೋತ್ಸವದ ಸಾಂಸ್ಕ್ರತಿಕ ಸಪ್ತೋತ್ಸವದ ಸಮಾರೋಪದಲ್ಲಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಫೈನಲಿಸ್ಟ್, ಸಚಿವರನ್ನೇ ಮಾಯ ಮಾಡಿದ ಖ್ಯಾತಿಯ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಜಾದೂ ಪ್ರದರ್ಶನಗೊಳ್ಳಲಿದೆ.

ಜನವರಿ 24 ಬುಧವಾರದಂದು ರಾತ್ರಿ 7.30 ಕ್ಕೆ ಶ್ರೀ ಕ್ರಷ್ಣ ಮಠದ ರಾಜಾಂಗಣದಲ್ಲಿ ಜಾದೂ, ಜಾನಪದ, ರಂಗಭೂಮಿ ಹಾಗೂ ಸಂಗೀತಗಳ ಸಮ್ಮಿಲನದ ವಿಸ್ಮಯ ಜಾದೂ ವಿನೂತನ ಜಾದೂ ತಂತ್ರಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲಿದೆ.

ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಮೂಲಕ ವಿಶ್ವದಾದ್ಯಂತ ಪ್ರಸಿದ್ದಿಯಾದ ತುಳುನಾಡಿನ ಭೂತಾರಾಧನೆಯ ಅಂಶವನ್ನು ಒಳಗೊಂಡ ಯಕ್ಷಿಣಿ, ಸುಪ್ತ ಮನಸ್ಸಿನ ಚಮತ್ಕಾರ, ನವರಸಪೂರ್ಣ ಜಾದೂ, ಸಮಕಾಲೀನ ಮತ್ತು ಆಧುನಿಕ ಮ್ಯಾಜಿಕ್ ಇಲ್ಯೂಷನ್ ಸಂಗಮದ ಕಾರ್ಯಕ್ರಮ ಪುತ್ತಿಗೆ ಪರ್ಯಾಯಕ್ಕಾಗಿ ವಿಶೇಷವಾಗಿ ಸಿದ್ದಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.