ಸುಲ್ತಾನ್ ಡೈಮಂಡ್ಸ್ ಎಂಡ್ ಗೋಲ್ಡ್ ನಲ್ಲಿ ‘ವಿಶ್ವವಜ್ರ’ ಪ್ರದರ್ಶನ: ವಜ್ರಾಭರಣದ ಮೇಲೆ ರಿಯಾಯತಿ ಮಾರಾಟ

ಉಡುಪಿ: ಇಲ್ಲಿನ ವಜ್ರಾಭರಣ ಮಳಿಗೆಯಾದ ಸುಲ್ತಾನ್ ಡೈಮಂಡ್ಸ್ ಎಂಡ್ ಗೋಲ್ಡ್ ನಲ್ಲಿ ಸೆ.26 ರಿಂದ ಅ.9 ರವರೆಗೆ ವಿಶ್ವದಾದ್ಯಂತದ ಅಮೂಲ್ಯ ವಜ್ರಗಳ ‘ವಿಶ್ವವಜ್ರ’ ವಜ್ರಾಭರಣ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಸೋಮವಾರದಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಜನತಾ ಫಿಶ್ ಮಿಲ್ ಮತ್ತು ಆಯಿಲ್ ಪ್ರಾಡಕ್ಟ್ ನ ಆಡಳಿತ ಪಾಲುದಾರ ಆನಂದ್ ಸಿ ಕುಂದರ್, ಸುಲ್ತಾನ್ ಚಿನ್ನಾಭರಣ ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸಂಗ್ರಹಗಳ ಗುಣಮಟ್ಟದ ಆಭರಣಗಳು ಇಲ್ಲಿ ದೊರೆಯುತ್ತವೆ. ಕೇವಲ ಲಾಭದ ಉದ್ದೇಶವಲ್ಲದೆ, ಜನಪರ ಕಾಳಜಿಯ ಕೆಲಸಗಳನ್ನೂ ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿದೆ. ಇಂತಹ ಸಂಸ್ಥೆ ಮತ್ತಷ್ಟು ಯಶಸ್ಸು ಹೊಂದಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಇಟಾಲಿಯನ್ ವಜ್ರಾಭರಣ ಸಂಗ್ರಹವನ್ನು ಉದ್ಯಮಿ ಸಾಧು ಸಾಲಿಯಾನ್, ಸಿಂಗಾಪುರ ವಜ್ರಾಭರಣ ಸಂಗ್ರಹವನ್ನು ತೋಳಾರ್ ಓಷಿಯನ್ ಪ್ರಾಡಕ್ಟ್ಸ್ ಪ್ರೈ.ಲಿ ನ ಆಡಳಿತ ನಿರ್ದೇಶಕ ಡಾ.ಪ್ರಕಾಶ್ ಸಿ ತೋಳಾರ್, ಬೆಲ್ಜಿಯಂ ಚಿನ್ನಾಭರಣ ಸಂಗ್ರಹವನ್ನು ಜಾಮಿಯ ಮಸೀದಿ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್, ಫ್ರೆಂಚ್ ಚಿನ್ನಾಭರಣ ಸಂಗ್ರಹವನ್ನು ನಾವುಂದದ ಮತ್ಸ್ಯೋದ್ಯಮಿ ಬಶೀರ್ ತೌಫಿಕ್, ಸಾಲಿಟೇರ್ ಸಂಗ್ರಹವನ್ನು ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ, ಕಿಯಾ ಲೈಟ್ ವೈಟ್ ಸಂಗ್ರಹವನ್ನು ಸನ್ ಶೈನ್ ಟ್ರಾವೆಲ್ಸ್ ನ ಸ್ಥಾಪಕಿ ಸರಿತಾ ಸಂತೋಷ್, ತನ್ ಮನಿಯಾ ಸಂಗ್ರಹವನ್ನು ಯಾಸ್ಮಿನ್ ತೋಟ ಅನಾವರಣಗೊಳಿಸಿದರು.

ಮೊದಲ ಗ್ರಾಹಕರಾದ ತಕ್ಷತ್, ರಕ್ಷತ್ ಹಾಗೂ ಜ್ಯೋತಿ ಇವರಿಗೆ ಆಭರಣಗಳನ್ನು ಹಸ್ತಾಂತರಿಸಲಾಯಿತು.

ಸಂಸ್ಥೆಯ ಮ್ಯಾನೇಜರ್ ಎ.ಕೆ.ಉನ್ನಿತ್ತನ್, ಪ್ರಾದೇಶಿಕ ಮ್ಯಾನೇಜರ್ ಸುಮೇಶ್, ಉಡುಪಿ ಬ್ರ್ಯಾಂಚ್ ಮ್ಯಾನೇಜರ್ ಮುಹಮ್ಮದ್ ಅಜ್ಮಲ್, ಕಾರ್ಪೊರೇಟ್ ಡೈಮಂಡ್ ಮ್ಯಾನೇಜರ್ ಅರುಣ್, ಸೇಲ್ಸ್ ಮ್ಯಾನೇಜರ್ ಇಲಿಯಾಸ್, ಸುಲ್ತಾನ್ ಗೋಲ್ಡ್ ವಾಚ್ ವಿಭಾಗದ ಮುಖ್ಯಸ್ಥ ಅಬ್ದುಲ್ ರಶೀದ್ ಮುಲ್ಕಿ, ಸುಲ್ತಾನ್ ಗ್ರೂಪ್ ಫ್ಲೋರ್ ಮ್ಯಾನೇಜರ್ ಸಿದ್ದಿಕ್ ಹಸನ್, ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಮುಹಮ್ಮದ್ ಶಾಮೀಲ್ ಖಾದರ್, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಸಾಹಿಲ್ ಝಾಹೀರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಇಟಲಿ, ಪ್ರಾನ್ಸ್, ಟರ್ಕಿ, ಅಮೇರಿಕಾ, ಸಿಂಗಾಪುರ ಮತ್ತು ಮಧ್ಯಪ್ರಾಚ್ಯದ ವಿಶೇಷ ಅಂತಾರಾಷ್ಟ್ರೀಯ ಸಂಗ್ರಹಗಳು ಸಂಸ್ಥೆಯಲ್ಲಿ ಲಭ್ಯವಿದ್ದು, ಪ್ರತಿ ಕ್ಯಾರೆಟ್ ವಜ್ರದ ಮೇಲೆ 8000/- ರೂ ಗಳ ರಿಯಾಯತಿ ಇದೆ.