ಉಡುಪಿ: ತೆಂಕಪೇಟೆ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಜಿ ಎಸ್ ಬಿ ಸಮಾಜ, ಯುವಕ ಹಾಗೂಮಹಿಳಾ ಮಂಡಳಿಯ ಆಶ್ರಯದಲ್ಲಿ, ಕಾರ್ತಿಕ ಮಾಸದ ಏಕಾದಶಿ ಅಂಗವಾಗಿ ಗುರುವಾರ ಭಜನಾ ಕಾರ್ಯಕ್ರಮ ಹಾಗೂ ಶುಕ್ರವಾರ ಮುಂಜಾನೆ ಶ್ರೀ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವ ರೂಪ ದರ್ಶನ ನೆರವೇರಿತು.
ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಶ್ರೀರಾಮ ದರ್ಶನ, ವೀರ ವಿಠಲ, ಶ್ರೀ ಕೃಷ್ಣ, ಗಜವದನ, ಈಶ್ವರ, ಮುಖ್ಯಪ್ರಾಣ ಹಾಗೂ ರಂಗೋಲಿಯಲ್ಲಿ ವಿವಿಧ ಬಗೆಯ ಚಿತ್ತಾರ, ಹೂಗಳಿಂದ ರಚಿಸಿದ ರಂಗೋಲಿ, ಹಣತೆಯ ದೀಪದಿಂದ ಓಂ, ಸ್ವಸ್ತಿಕ್, ಶಂಖ ಚಕ್ರ ಗಳನ್ನು ರಚಿಸಲಾಯಿತು. ಶ್ರೀ ದೇವರಿಗೆ ವಿಶೇಷ ಅಲಂಕಾರ, ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.
ಧಾರ್ಮಿಕ ಪೂಜಾವಿಧಾನಗಳನ್ನು ಅರ್ಚಕರಾದ ವಿನಾಯಕ ಭಟ್, ದಯಾಘನ್ ಭಟ್ ನೆರವೇರಿಸಿದರು. ದೇವಳದ ಆಡಳಿತಮೊಕ್ತೇಸರ ಪಿ ವಿ ಶೆಣೈ, ನರಸಿಂಹ ಕಿಣಿ, ಭಾಸ್ಕರ್ ಶೆಣೈ , ಪ್ರದೀಪ್ ರಾವ್, ದೀಪಕ್ ಭಟ್, ಜಿ ಎಸ್ ಬಿ ಯುವಕ ಮಂಡಲದ ಅಧ್ಯಕ್ಷ ನಿತೇಶ್ ಶೆಣೈ, ವಿಶಾಲ್ ಶೆಣೈ, ಉಮೇಶ್ ಪೈ, ನರಹರಿ ಪೈ, ಗಿರೀಶ ಭಟ್, ಸತೀಶ್ ಕಿಣಿ, ಆಡಳಿತ ಮಂಡಳಿಯ ಸದಸ್ಯರು, ಜಿ ಎಸ್ ಬಿ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು ನೂರಾರು ಭಕ್ತರು ಉಪಸ್ಥಿತರಿದ್ದರು.