ಹೈದರಾಬಾದ್: ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಹೈದಾರಾಬಾದ್ ಪೊಲೀಸರು ಎನ್ ಕೌಂಟರ್ ಮಾಡುವ ಮೂಲಕ ಯಮಲೋಕಕ್ಕೆ ಅಟ್ಟಿದ್ದಾರೆ. ಈ ಎನ್ ಕೌಂಟರ್ ನ ರುವಾರಿ ಯಾರು ಗೊತ್ತೇ? ನಮ್ಮ ಕರ್ನಾಟಕದ ಹುಬ್ಬಳ್ಳಿ ಮೂಲದವರಾದ ವಿಶ್ವನಾಥ್ ಸಜ್ಜನರ್ ಎನ್ನುವ ದಕ್ಷ ಐಪಿಎಸ್ ಅಧಿಕಾರಿ.
ಹೌದು ಕಳೆದ ವರ್ಷದ ಮಾರ್ಚ್ ನಲ್ಲಿ ಹೈದರಾಬಾದ್ ಪೊಲೀಸ್ ಕಮಿಶನರ್ ಹುದ್ದೆಯನ್ನು ಅಲಂಕರಿಸಿದ್ದ ಸಜ್ಜನರ್ ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಇದೀಗ ಅತ್ಯಾಚಾರ ಮಾಡಿದ ದರುಳರ ಮೇಲೆ ಎನ್ ಕೌಂಟರ್ ಮಾಡುವ ಮೂಲಕ ದುಷ್ಟರಿಗೆ ದೇಶದಲ್ಲಿ ಜಾಗವಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಕನ್ನಡಿಗ ಅಧಿಕಾರಿ ಸಜ್ಜನರ್. ಈ ಅಧಿಕಾರಿಗೊಂದು ಸಲಾಂ ಹೊಡಿಯಲೇಬೇಕು ಅಲ್ಲವೇ?