ಉಡುಪಿ: ವಿಶ್ವ ಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ಶುಕ್ರವಾರ ಶ್ರೀ ಲಕ್ಷ್ಮೀ ನಾರಾಯಣ ವಸತಿ ಗೃಹದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷ ಯು ವಿಶ್ವನಾಥ ಶೆಣೈ ಇವರು ಚೆಸ್ ಪಂದ್ಯದಲ್ಲಿ ವಿಶೇಷ ಸಾಧನೆ ಗೈದ ವಿದ್ಯಾರ್ಥಿ ಮಾಹಿನ್ ರವರಿಗೆ 18,೦೦೦ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದರು. ಇದೆ ಸಂದರ್ಭದಲ್ಲಿ ಶ್ರೀಮತಿ ಪ್ರಭಾ ವಿ ಶೆಣೈರವರು ಮೂಲ್ಕಿ ನಿವಾಸಿ ಶ್ರೀನಿವಾಸ ಭಟ್ ರವರಿಗೆ ಹೃದಯ ಕಾಯಿಲೆಯ ಚಿಕಿತ್ಸೆಗೆ 25,000 ರೂಪಾಯಿ ಚೆಕ್ ಅನ್ನು ನೀಡಿದರು.
ವೇದಿಕೆಯಲ್ಲಿ ಪ್ರಶಾಂತ್ ಕಾಮತ್, ಮನೋಹರ್ ಶೆಣೈ , ಅಂಜನಿ ಎಮ್ ಶೆಣೈ, ವಿನಾಯಕ ಬಾಳಿಗಾ, ಗೀತಾ ಎಸ್ ಕೋಟ್ಯಾನ್ , ಜಲದುರ್ಗಾ ಮಹಿಳಾ ಸಂಘ ಕೀಳೆಂಜೆ ಅಧ್ಯಕ್ಷೆ ಸುನೀತಾ ಲೋಕನಾಥ್ ಕೋಟ್ಯಾನ್, ಆಶಾ ,ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.