ಗ್ರಾಮ ಸಹಾಯಕ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಉಡುಪಿ ತಾಲೂಕು ಅಲೆವೂರು ಗ್ರಾಮದ ಗ್ರಾಮ ಸಹಾಯಕ ತಾತ್ಕಾಲಿಕ ಹುದ್ದೆ ನೇಮಕಾತಿಗೆ, ಷರತ್ತಿಗೊಳಪಟ್ಟು 25 ರಿಂದ 45 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸದ್ರಿ ಗ್ರಾಮದಲ್ಲಿ ವಾಸವಿರುವ, ಓದು, ಬರಹ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವ, ಈ ಹಿಂದೆ ಗ್ರಾಮ ಸಹಾಯಕರಾಗಿದ್ದು, ಸೇವೆಯಲ್ಲಿರುವಾಗಲೇ ಮರಣ ಹೊಂದಿದವರ ಕುಟುಂಬದ ಸದಸ್ಯರು ಅಥವಾ ಸ್ಥಳೀಯ ಕಚೇರಿಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಜೂನ್ 30 ರ ಒಳಗಾಗಿ ಉಡುಪಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ನಿಗಧಿತ ಸಮಯದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಉಡುಪಿ ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.