ಅಂಬಲಪಾಡಿ: ಕೇಂದ್ರ ಸರಕಾರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಂಬಲಪಾಡಿ , ಅಂಬಲಪಾಡಿ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಭಾರತ ಸರಕಾರದ ಯೋಜನೆಯಾದ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಕಾರ್ಯಕ್ರಮ ಅಂಬಲಪಾಡಿ ಬಸ್ ನಿಲ್ದಾಣದ ಬಳಿ ಗುರುವಾರದಂದು ಜರಗಿತು. ಎಲ್ ಡಿ ಎಂ ಪಿಂಜರ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವ ಕರ್ಮ ಯೋಜನೆ ಅಡಿಯಲ್ಲಿ 18 ರೀತಿಯ ಸ್ವ ಉದ್ಯೋಗವನ್ನು ಆರಂಭಿಸಲು ಶೇ 5 % ಬಡ್ಡಿದರದಲ್ಲಿ ಧನ ಸಹಾಯ ನೀಡುತ್ತಿದ್ದು, ಗ್ರಾಮೀಣ ಹಾಗೂ ನಗರದ ಯುವ ಜನಾಂಗ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆ – ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಲವಾರು ಜನಪರ ಯೋಜನೆಗಳನ್ನು ನಮ್ಮ ದೇಶದ ಎಲ್ಲ ನಾಗರಿಕರಿಗೆ ಸುಲಭವಾಗಿ ಸಿಗುವ ಉದ್ದೇಶ ದಿಂದ ಈ ಯೋಜನೆಯನ್ನು ಕಟ್ಟ ಕಡೆಯ ವ್ಯಕ್ತಿಯ ವರೆಗೆ ತಲುಪಿಸುವುದಕೋಸ್ಕರ ಸಂಚಾರಿ ವಾಹನದಲ್ಲಿ ಡಿಜಿಟಲ್ ಪರದೆಯ ಮುಖಾಂತರ ಮಾಹಿತಿ ಮತ್ತು ವಿವರಣೆಯನ್ನು ನೀಡುತ್ತಿದೆ. ಇದರ ಪ್ರಯೋಜನವನ್ನು ಎಲ್ಲ ನಾಗರಿಕರು ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಮುಖ್ಯ ಅತಿಥಿಯಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಬಂಧಕ ಗೌರವ್ ಸಿಂಗ್ , ಮಾತನಾಡಿ ಸರಕಾರದ ಯೋಜನೆಯನ್ನು ಪಡೆದುಕೊಳ್ಳುವ ಸುಲಭ ಮಾರ್ಗದ ವಿವರ ನೀಡಿ ಸ್ಥಳದಲ್ಲಿಯೇ ಗ್ರಾಹಕರಿಗೆ ಚೆಕ್ ವಿತರಿಸಿದರು.
ಉಡುಪಿ ನಗರಸಭಾ ಅಧಿಕಾರಿ ಗುರುಪ್ರಸಾದ್, ಅಂಬಲಪಾಡಿ ಅಂಚೆ ಪೇದೆ ಮಂಜುನಾಥ್, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ಯೋಗೇಶ್ ಶೆಟ್ಟಿ, ಉಪಾಧ್ಯಕ್ಷೆ ಸುಜಾತ ಸುಧಾಕರ್, ಯುವಕ ಮಂಡಲದ ಅಧ್ಯಕ್ಷ ಹರೀಶ್ ಆಚಾರ್ಯ, ಶಿವಕುಮಾರ ಅಂ ಬಲಪಾಡಿ ಮಾಜಿ ಉಪಾಧ್ಯಕ್ಷ, ಆರ್ ಸೈಟ್ ನ ರವಿ, ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕಿನ ಅಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.