ತ್ರಿಶಾ ಕ್ಲಾಸಸ್: ಸಂಭ್ರಮದ ವಿಕಸನ ಶಿಬಿರಕ್ಕೆ ತೆರೆ

ಉಡುಪಿ: ತ್ರಿಶಾ ಕ್ಲಾಸಸ್ ನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ 7 ದಿನಗಳ ಉಚಿತ ‘ವಿಕಸನ’ ಕಾರ್ಯಕ್ರಮವನ್ನು ಅಕ್ಟೋಬರ್ ೬ ರಂದು ಉದ್ಘಾಟಿಸಲಾಗಿದ್ದು, ಅಕ್ಟೋಬರ್ 12 ರಂದು ಶಿಬಿರವು ಸಮಾಪನೆಗೊಂಡಿತು ಸಂಪನ್ನಗೊಂಡಿತು.

ಸಂಸ್ಥೆಯ ಅಧ್ಯಕ್ಷ ಸಿಎ ಗೋಪಾಲಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿತ್ಯ ನೂತನವಾಗಿರುವ ಈ ಜಗತ್ತಿನಲ್ಲಿ ಪ್ರತಿನಿತ್ಯವೂ ವ್ಯಕ್ಯಿತ್ವದಲ್ಲಿ ವಿಕಸನವನ್ನು ಹೊಂದುತ್ತಾ ಮುಂದುವರಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಶಿಬಿರವು ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿಬಿರದಲ್ಲಿ ಭಾಗವಹಿಸಿದ್ದ ಉಡುಪಿಯ ವಿವಿಧ ಶಾಲೆಯ 89 ವಿದ್ಯಾರ್ಥಿಗಳಿಗೆ ಜೀವನಕ್ಕೆ ಪೂರಕವಾದ ವ್ಯಕ್ತಿತ್ವ ವಿಕಸನ ವಿಚಾರಗಳ ಜೊತೆ ಪರೀಕ್ಷೆಯನ್ನು ಎದುರಿಸಲು ಬೇಕಾದ ವಿವಿಧ ಅಂಶಗಳನ್ನು, ಚಟುವಟಿಕೆಯೊಂದಿಗೆ ಭೋದನೆಯನ್ನು ಮಾಡಲಾಯಿತು. ಬೇರೆ ಬೇರೆ ವಿಷಯ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳನ್ನು ಒಂದು ದಿನ ಕಾಯಿನ್ ಮ್ಯೂಸಿಯಂ, ಮಣಿಪಾಲ್ ಪ್ರೆಸ್, ಅನಾಟೆಮಿ ವೀಕ್ಷಣೆಗೆ ಕರೆದೊಯ್ಯಲಾಯಿತು. ಬಹಳ ಉತ್ಸಾಹದಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು.