ಮಂಗಳೂರು: ವಿಜಯೋತ್ಸವ ವೇಳೆ ಪೊಲೀಸರು ಕಾರ್ಯಕರ್ತರ ಮಧ್ಯೆ ವಾಗ್ವಾದ

ಮಂಗಳೂರು: ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿಜಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ಚುನಾವಣಾ ಕಚೇರಿ ಮುಂಭಾಗ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು‌.
ವಾಹನವೊಂದರಲ್ಲಿ‌ ಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸರು ಅಡ್ಡಿಪಡಿಸಿದ್ದು, ವಾಗ್ವಾದಕ್ಕೆ ಕಾರಣ ವಾಯಿತು.
ಹಿಂದೂಗಳಿಗೆ ಮಾತ್ರ ರಸ್ತೆಯಲ್ಲಿ ಉದ್ಘೋಷ ಕೂಗಲು ನೀವು ಬಿಡಲ್ಲ, ಪಂಪ್ ವೆಲ್ ಮುಂತಾದೆಡೆ ಇತರ ಸಮುದಾಯ ಗಂಟೆಗಳ ಕಾಲ ಸಂಚಾರಕ್ಕೆ ಅಡಚಣೆ ಮಾಡಿದರೂ ಸುಮ್ಮನಿರುತ್ತೀರಿ ಎಂದು ಬಿಜೆಪಿ ಕಾರ್ಯಕರ್ತರು ಪೊಲೀಸರಲ್ಲಿ ಪ್ರಶ್ನಿಸಿದರು. ಬಳಿಕ ಪೊಲೀಸರು ಸ್ಥಳದಿಂದ ವಾಹನ ಹಾಗೂ ಕಾರ್ಯಕರ್ತರನ್ನು ತೆರವುಗೊಳಿಸಿದರು.