ಸರಕಾರಿ ಶಾಲೆ ಉಳಿಸಿ ದೇಶದ ಸಂಸ್ಕೃತಿಯನ್ನು ಬೆಳೆಸಿ: ವಿಜಯ್ ಕೊಡವೂರು

ಉಡುಪಿ: ತಾಲೂಕಿನ ಸುಬ್ರಮಣ್ಯ ಹಿಲ್ 19 ನೆಯ ಶಾಲೆಗೆ ಉಚಿತ ಅಪಘಾತ ವಿಮೆಯನ್ನು ನ.14 ರಂದು ವಿಜಯ್ ಕೊಡವೂರು ಇವರ ಸಂಯೋಜನೆಯಲ್ಲಿ ದಾನಿಗಳಾದ ಅಪೂರ್ವ ಪುತ್ತೂರು ತಂಡದ ಸಹಕಾರದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು, ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕು. ವಿದ್ಯಾಭ್ಯಾಸದ ಜೊತೆಯಲ್ಲಿ ನಮ್ಮ ದೇಶದ ಪರಂಪರೆ ಮತ್ತು ಇತಿಹಾಸವನ್ನು ನೆನಪಿಸುವ ಮೂಲಕ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸಲಾಗುತ್ತಿದೆ. ಆದುದರಿಂದ ನಾವು ಸರಕಾರಿ ಶಾಲೆಗಳನ್ನು ಉಳಿಸುವ ಅವಶ್ಯಕತೆ ಇದೆ. ಉಡುಪಿ ಜಿಲ್ಲೆಯ ಎಲ್ಲ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಈ ನಮ್ಮ ಚಿಕ್ಕ ಪ್ರಯತ್ನ ಎಂದರು.

ಅಪೂರ್ವ ಪುತ್ತೂರು ತಂಡದ ಅಧ್ಯಕ್ಷ ಅಶೋಕ್, ಸ್ಟಾರ್ ಹೆಲ್ತ್ ಪ್ರಮುಖ ಉದಯ್ ನಾಯ್ಕ್, ಹಳೆ ವಿದ್ಯಾರ್ಥಿ ಪುರಂದರ ಶೆಟ್ಟಿ, ಎಸ್. ಡಿ.ಎಂ.ಸಿ ಅಧ್ಯಕ್ಷೆ ಸುಭಾಶಿನಿ, ಕಿಶೋರ್, ಅಶೋಕ್ ,ಪ್ರಸೀದ್, ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ, ಸಹ ಶಿಕ್ಷಕಿ ನಿಶಾವತಿ ಮತ್ತಿತರರು ಉಪಸ್ಥಿತರಿದ್ದರು.