ಉಡುಪಿ:ಕೊಡವೂರು ವಾರ್ಡಿನ ದಿವ್ಯಾಂಗ ರಕ್ಷಣಾ ಸಮಿತಿಯ ಕಾರ್ಯ ಮತ್ತು ಬೆನ್ನು ಮೂಳೆ ಮುರಿತಕ್ಕೆ ಒಳಗಾದವರ ಆರೈಕೆ, ದಿವ್ಯಾಂಗರಿಗೆ ಸಮಾವೇಶ, ಮತ್ತು ಸರಕಾರದ ಮತ್ತು ದಾನಿಗಳ ನೆರವಿನಿಂದ ದಿವ್ಯಾಂಗರಿಗೆ ಸವಲತ್ತು ಸಿಗುವಂತೆ ಸದಾ ಹೋರಾಟ ಹಾಗೂ ದಿವ್ಯಾಂಗರಿ ಕೆಲಸ ಸಿಗಬೇಕು ಎನ್ನುವ ದೃಷ್ಟಿಯಿಂದ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ದಿವ್ಯಾಂಗರ ಉದ್ಯೋಗ ಮೇಳ ಎಂಬ ಕಲ್ಪನೆಯನ್ನು ಸಾಕಾರಗೊಳಿಸಿದ ವಿಜಯ್ ಕೊಡವೂರು ಅವರಿಗೆ ಗೆರಕನ್ ಹರಪನ್ ಬಾರು ಮಲೇಷ್ಯಾ ವತಿಯಿಂದ ರಾಜಾಂಗಣದಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು.
ಕೇವಲ ರಸ್ತೆ ಚರಂಡಿ ಎಂದು ಯೋಚನೆ ಮಾಡದೆ, ದಿವ್ಯಾಂಗರಿಗೆ ಸಮಿತಿ, ಕೃಷಿ ಸಮಿತಿ, ಕೆಲಸ ಇಲ್ಲದವರಿಗೆ ಕೆಲಸ ಸಿಗುವಂತೆ ಸಮಿತಿ, ರಕ್ತ ನಿಧಿ ಸಮಿತಿ, ಹೀಗೆ ಹತ್ತು ಹಲವು ಸಮಿತಿ ಮೂಲಕ ಕೊಡವೂರಿನಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಿರುವ ವಿಜಯ್ ಕೊಡವೂರು ಅವರ ಕಾರ್ಯವು ಇಡೀ ದೇಶಕ್ಕೆ ಮಾದರಿ ಎನ್ನುವ ಕಾರಣದಿಂದ ಈ ಗೌರವವನ್ನು ಅವರಿಗೆ ಸಲ್ಲಿಸಲಾಗಿದೆ.