ವಿದ್ಯಾಮೃತ – 2024: CET ಪರೀಕ್ಷೆಗೆ ತರಬೇತಿ ಕಾರ್ಯಕ್ರಮ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾಸಂಸ್ಥೆಯು ವಿಕಸನ ಫೌಂಡೇಶನ್ ಜತೆ ಒಪ್ಪಂದ ಮಾಡಿಕೊಂಡು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದು ಇಂಜಿನಿಯರಿಂಗ್ ಮುಂತಾದ ಕೋರ್ಸ್ಗಳಲ್ಲಿ ಪ್ರವೇಶ ಪಡೆಯಲು ನಡೆಸುವ “ಸಾಮಾನ್ಯ ಪ್ರವೇಶ ಪರೀಕ್ಷೆ 2024” ರಲ್ಲಿ ಉತ್ತಮ ಅಂಕಗಳಿಸಲು “ವಿದ್ಯಾಮೃತ – 2024” ಎಂಬ ತರಬೇತಿ ಕಾರ್ಯಕ್ರಮವನ್ನು ಎಪ್ರೀಲ್ 2024ರಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮ ಪಿಯುಸಿ ಪರೀಕ್ಷೆ ಮುಗಿದ ತಕ್ಷಣ 10 ದಿನಗಳ ತರಬೇತಿ ಕಾರ್ಯಕ್ರಮವನ್ನು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್‌ನಲ್ಲಿ 24ಮಾರ್ಚ್ ರಿಂದ 02 ಎಪ್ರಿಲ್ ತನಕ ಹಾಗೂ ಉಳಿದ ಭಾಗದ ತರಬೇತಿಯು 03 ಎಪ್ರಿಲ್ ರಿಂದ “ಸಾಮಾನ್ಯ ಪ್ರವೇಶ ಪರೀಕ್ಷೆ 2024” ಮುಗಿಯುವ ತನಕ online ಮೂಲಕ ನಡೆಸಲಾಗುತ್ತದೆ.
ಈ ಕೋರ್ಸ್ಗೆ ಸುಮಾರು ರೂ 10,000 ಖರ್ಚು ವೆಚ್ಚ ಬರುತ್ತಿದ್ದು, ಇದರಲ್ಲಿ ರೂ 9050 ಅನ್ನು ಶ್ರೀ ರಾಮಕೃಷ್ಣ ಆಶ್ರಮ, ಬಿಎನ್‌ಎಂಐಟಿ, ಬೆಂಗಳೂರು ಹಾಗೂ ಟೀಚರ್ ಸಂಸ್ಥೆ ಇವರ ಮೂಲಕ ವಿಕಸನ ಫೌಂಡೇಶನ್ ಭರಿಸುತ್ತಿದೆ, ಉಳಿದ ರೂ 950 ವಿದ್ಯಾರ್ಥಿಗಳು ಭರಿಸಬೇಕಾಗುತ್ತದೆ.


ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9035548499 ಅನ್ನು ಸಂಪರ್ಕಿಸಬಹುದು.

Link:   https://forms.gle/kJ27zcGTLjRpPo2KA