ಉಡುಪಿ: ಬ್ರಹ್ಮಾವರ ತಾಲೂಕು ಮುಂಡ್ಕಿನಜಡ್ಡುವಿನ ವಿದುಷಿ ದೀಕ್ಷಾ ವಿ. ಅವರು ಅಜ್ಜರಕಾಡಿನ ಡಾ. ಜಿ.ಶಂಕರ ಮಹಿಳಾ ಕಾಲೇಜಿನ ಪಿಜಿ ಸಭಾಭವನದಲ್ಲಿ ವಿಶ್ವ ದಾಖಲೆಗಾಗಿ 7 ದಿನಗಳಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದು, ಗುರುವಾರ ಸಂಜೆ 5.30ಕ್ಕೆ 170 ಗಂಟೆಗಳ ಗಡಿಯನ್ನು ದಾಟಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಹಿಂದಿನ 170 ಗಂಟೆಗಳ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯನ್ನು ಮೀರಿಸಿದ್ದಾರೆ.
ಆಗಸ್ಟ್ 21 ರಂದು ಮಧ್ಯಾಹ್ನ 3:30ಕ್ಕೆ ನೃತ್ಯ ಪ್ರದರ್ಶನ ಪ್ರಾರಂಭವಾಗಿದ್ದು, ಒಂಭತ್ತು ದಿನಗಳಲ್ಲಿ 216 ಗಂಟೆಗಳ ಕಾಲ ಪೂರ್ಣಗೊಳಿಸುವ ಗುರಿಯನ್ನು ದೀಕ್ಷಾ ಹೊಂದಿದ್ದಾರೆ. ಮಂಗಳೂರಿನ ರೆಮೋನಾ ಎವೆಟ್ಟೆ ಪೆರೇರಾ 170 ಗಂಟೆಗಳ ಭರತನಾಟ್ಯ ಪ್ರದರ್ಶನದೊಂದಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಪ್ರವೇಶಿಸಿದ್ದರು. ಮಣಿಪಾಲದ ರತ್ನ ಸಂಜೀವ ಕಲಾ ಮಂಡಲದ ಪ್ರೋತ್ಸಾಹದಲ್ಲಿ ವಿದುಷಿ ದೀಕ್ಷಾ ವಿ. ಆ.30ರವರೆಗೆ 216 ತಾಸು(9ದಿನ) ನಿರಂತರ “ನವರಸ ದೀಾ ವೈಭವಂ’ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.












