ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ: ರಾಜ್ಯಕ್ಕೆ ಪ್ರಥಮ ರ್‍ಯಾಂಕ್

ಉಡುಪಿ:  ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜು ದ್ವಿತೀಯ ಪಯುಸಿ ಪರೀಕ್ಷೆಯಲ್ಲಿ ಶೇ. 100  ಫಲಿತಾಂಶ ಗಳಿಸಿದೆ.

ವಿಜ್ಞಾನ ವಿಭಾಗದಲ್ಲಿ 285 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 190 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 94 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ 168 ಮಂದಿ ಪರೀಕ್ಷೆ ಬರೆದಿದ್ದು, 72 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 92 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ರಾಜ್ಯ ಮಟ್ಟದಲ್ಲಿ ವಿದ್ಯೋದಯದ ಅಪೂರ್ವ ಸಾಧನೆ
ಉಡುಪಿ ವಿದ್ಯೋದಯ ಟ್ರಸ್ಟ್‌ನ ಅಂಗ ಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜು ರಾಜ್ಯಕ್ಕೆ ವಿಜ್ಞಾನ ವಿಭಾಗದಲ್ಲಿ ಮೊದಲ ರ್‍ಯಾಂಕನ್ನು ಹಾಗೆಯೇ 4ನೇ, 5ನೇ ಮತ್ತು 6ನೇ ರ್‍ಯಾಂಕನ್ನು ಗಳಿಸಿರುತ್ತದೆ.

ವಿಜ್ಞಾನ ವಿಭಾಗ:

ಅಭಿಜ್ಞಾ ರಾವ್ : ಇಂಗ್ಲೀಷ್‍ನಲ್ಲಿ 96, ಸಂಸ್ಕøತದಲ್ಲಿ 100, ಭೌತಶಾಸ್ತ್ರದಲ್ಲಿ 100, ರಸಾಯನಶಾಸ್ತ್ರದಲ್ಲಿ 100, ಗಣಿತ ಶಾಸ್ತ್ರದಲ್ಲಿ 100, ಗಣಕಶಾಸ್ತ್ರದಲ್ಲಿ 100 ಅಂಕ ಗಳಿಸುವ ಮೂಲಕ ಒಟ್ಟು 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ.

ಗ್ರೀಷ್ಮಾ : ಇಂಗ್ಲೀಷ್‍ನಲ್ಲಿ 98, ಹಿಂದಿಯಲ್ಲಿ 95, ಭೌತಶಾಸ್ತ್ರದಲ್ಲಿ 100, ರಸಾಯನ ಶಾಸ್ತ್ರದಲ್ಲಿ 100, ಗಣಿತಶಾಸ್ತ್ರದಲ್ಲಿ 100, ಜೀವಶಾಸ್ತ್ರದಲ್ಲಿ 100 ಅಂಕ ಗಳಿಸಿ, ಒಟ್ಟು 593 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ

ಪದ್ಮಿಕಾ ಕೆ. ಶೆಟ್ಟಿ : ಇಂಗ್ಲೀಷ್‍ನಲ್ಲಿ 97, ಹಿಂದಿ 98, ಭೌತಶಾಸ್ತ್ರದಲ್ಲಿ 99, ರಸಾಯನ ಶಾಸ್ತ್ರದಲ್ಲಿ 98, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ 100 ಅಂಕಗಳೊಂದಿಗೆ ಒಟ್ಟು 592 ಅಂಕವನ್ನು ಗಳಿಸಿ ರಾಜ್ಯಕ್ಕೆ 5ನೇ ರ್ಯಾಂಕ್.

ಮೈಥಿಲಿ ಪದವು : ಇಂಗ್ಲೀಷ್‍ನಲ್ಲಿ 95, ಹಿಂದಿ 98, ಭೌತಶಾಸ್ತ್ರದಲ್ಲಿ 97, ರಸಾಯನ ಶಾಸ್ತ್ರದಲ್ಲಿ 98, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ 100 ಅಂಕಗಳೊಂದಿಗೆ ಒಟ್ಟು 588 ಅಂಕವನ್ನು ಗಳಿಸಿ ರಾಜ್ಯಕ್ಕೆ 9ನೇ ರ್ಯಾಂಕ್.

ವಾಣಿಜ್ಯ ವಿಭಾಗದಲ್ಲಿ
ಅಯೋನಾ ಲೆವಿಸ್ : ಇಂಗ್ಲೀಷ್ 93, ಹಿಂದಿ 97, ವ್ಯವಹಾರ ಅಧ್ಯಯನ 100, ಲೆಕ್ಕಶಾಸ್ತ್ರದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100, ಮೂಲಗಣಿತದಲ್ಲಿ 99 ಅಂಕವನ್ನು ಗಳಿಸಿ ಒಟ್ಟು 589 ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ರ್ಯಾಂಕ್ ಗಳಿಸಿರುತ್ತಾರೆ ಎಂದು ಪ್ರಾಂಶುಪಾಲರಾದ ಶ್ರೀ.ಎ.ಎಲ್. ಛಾತ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.