ಖ್ಯಾತ ನಿರ್ದೇಶಕ ವೆಟ್ರಿ ಮಾರನ್ ಅವರ ‘ಪೆಟ್ಟೈಕಾಲಿ’, ತಮಿಳುನಾಡಿನ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು ಆಧರಿಸಿದ ಮೊದಲ ವೆಬ್ ಸರಣಿ, ಈ ವರ್ಷ ದೀಪಾವಳಿಯಿಂದ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರದರ್ಶನಗೊಳ್ಳಲಿದೆ. ವೆಟ್ರಿ ಮಾರನ್ ಅವರ ‘ಪೆಟ್ಟೈಕಾಳಿ’ ಚಿತ್ರವನ್ನು ಅವರ ಬಹುಕಾಲದ ಸಹಾಯಕ ರಾಜ್ ಕುಮಾರ್ ನಿರ್ದೇಶಿಸಿದ್ದಾರೆ. ಸಾಕಷ್ಟು ಆಸಕ್ತಿಯನ್ನು ಹುಟ್ಟುಹಾಕಿರುವ ಈ ಸರಣಿಯು ಒಟಿಟಿ ಪ್ಲಾಟ್ಫಾರ್ಮ್ ಆಹಾ ತಮಿಳಿನಲ್ಲಿ ತೆರೆಕಾಣಲಿದೆ.
ಈ ಸರಣಿಯು ಪ್ರೇಕ್ಷಕರನ್ನು ಹಿಂದೆಂದೂ ನೋಡಿರದ ಆಳವಾದ ಜಲ್ಲಿಕಟ್ಟು ಜಗತ್ತಿನೊಳಗೆ ತೆಗೆದುಕೊಂಡು ಹೋಗಲಿದೆ ಎಂದು ನಿರೀಕ್ಷಿಸಲಾಗಿದೆ. ತುಳುನಾಡಿನ ಕಂಬಳದಂತೆಯೆ ತಮಿಳುನಾಡಿನ ಜಲ್ಲಿಕಟ್ಟು ಕೂಡಾ ಅವರ ಕೃಷಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಈ ವೆಬ್ ಸೀರೀಸ್ ಅನ್ನು ಅತ್ಯಂತ ಜತನದಿಂದ ಹೆಣೆಯಲಾಗಿದೆ ಎನ್ನಲಾಗಿದೆ.
ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದು, ವೆಟ್ರಿ ಮಾರನ್ ಅವರ ನಂಬಿಕಸ್ಥ ಕ್ಯಾಮರಾಮನ್ ವೇಲ್ರಾಜ್ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ. ‘ಪೆಟ್ಟೈಕಾಲಿ’ ಜಲ್ಲಿಕಟ್ಟು ಆಧಾರಿತ ಮೊದಲ ವೆಬ್ ಸರಣಿಯಾಗಿದೆ. ಇದರ ಟ್ರೈಲರ್ ಅನ್ನು ಕನ್ನಡ ನಟ ಕಿಶೋರ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.