ಮುಂಬೈ: ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮ ಅತ್ಯುತ್ತಮ ನಟನೆಯಿಂದ ಛಾಪು ಮೂಡಿಸಿದ್ದ ಹಿರಿಯ ನಟಿ ಸೀಮಾ ಡಿಯೋ ಗುರುವಾರ ನಿಧನರಾಗಿದ್ದಾರೆ.ಇವರಿಗೆ 81 ವರ್ಷ ವಯಸ್ಸಾಗಿತ್ತು. ನಟಿ ಆಲ್ಝೈಮರ್ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಸೀಮಾ ಡಿಯೋ ಇಹಲೋಕ ತ್ಯಜಿಸಿರುವುದಾಗಿ ಮಗ ಅಜಿಂಕ್ಯಾ ಡಿಯೋ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.ಮರಾಠಿ ಮತ್ತು ಹಿಂದಿ ಚಿತ್ರರಂಗದ ಹಿರಿಯ ನಟಿ ಸೀಮಾ ಡಿಯೋ ಗುರುವಾರ ನಿಧನರಾಗಿದ್ದಾರೆ.
ಮರಾಠಿ ಭಾಷೆಯ ಜಗಚ್ಯಪತಿವರ್ ಚಿತ್ರಕ್ಕಾಗಿ ಇವರು ಹೆಚ್ಚು ಫೇಮಸ್ ಆಗಿದ್ದಾರೆ. ಈವರೆಗೆ 80ಕ್ಕೂ ಹೆಚ್ಚು ಮರಾಠಿ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 2020 ರಲ್ಲಿ ನಟ ಅಜಿಂಕ್ಯಾ ಡಿಯೋ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ತಮ್ಮ ತಾಯಿ, ಹಿರಿಯ ನಟಿ ಸೀಮಾ ಡಿಯೋ ಅವರು ಆಲ್ಝೈಮರ್ ಖಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು.ಸೀಮಾ ಡಿಯೋ ಅವರು ದಿವಂಗತ ನಟ ರಮೇಶ್ ಡಿಯೋ ಅವರ ಪತ್ನಿ. ಇವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸೀಮಾ ಅವರು ರಾಜೇಶ್ ಮತ್ತು ಅಮಿತಾಭ್ ಬಚ್ಚನ್ ಅಭಿನಯದ ‘ಆನಂದ್’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ 1971ರಲ್ಲಿ ಬಿಡುಗಡೆ ಕಂಡು ಸೂಪರ್ ಹಿಟ್ ಆಗಿತ್ತು. ಪ್ರಸಿದ್ಧ ಮರಾಠಿ ನಟ ಅಜಿಂಕ್ಯಾ ಡಿಯೋ ಮತ್ತು ನಿರ್ಮಾಪಕ ಅಭಿನಯ್ ಡಿಯೋ ಇವರಿಬ್ಬರು ಸೀಮಾ ಡಿಯೋ ಮಕ್ಕಳಾಗಿದ್ದಾರೆ.
ಸೀಮಾ ಡಿಯೋ ಬಗ್ಗೆ.. 1942 ರಲ್ಲಿ ಸೀಮಾ ಡಿಯೋ ಅವರು ಮುಂಬೈನ ಗಿರ್ಗೋನ್ನಲ್ಲಿ ಜನಿಸಿದರು. ಆಗ ಇವರ ಹೆಸರು ನಳಿನಿ ಸರಾಫ್ ಎಂಬುದಾಗಿತ್ತು. ಇವರು ಐದು ದಶಕಗಳಿಗೂ ಹೆಚ್ಚು ಕಾಲ ಸಿನಿ ರಂಗದಲ್ಲಿ ಮಿಂಚಿದ್ದರು. ಹಿಂದಿ ಮತ್ತು ಮರಾಠಿ ಚಿತ್ರರಂಗಕ್ಕೆ ಸೀಮಾ ಗಣನೀಯ ಕೊಡುಗೆ ನೀಡಿದ್ದಾರೆ. ಮರಾಠಿ ಸಿನಿಮಾಗಳಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಆದರೆ, ಹಿಂದಿ ಚಲನಚಿತ್ರಗಳಿಗಾಗಿ ಹೆಚ್ಚು ಫೇಮಸ್ ಆಗಿದ್ದಾರೆ. ಉದಾಹರಣೆಗೆ ಸರಸ್ವತಿಚಂದ್ರ, ಸಂಸಾರ್, ಕೋಶಿಶ್, ಆನಂದ್, ಮರ್ದ್ ಮತ್ತು ಇತರ ಚಿತ್ರಗಳು ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಹೆಸರಾಂತ ನಟ ರಮೇಶ್ ಡಿಯೋ ಅವರ ಪತ್ನಿ ಸೀಮಾ ಡಿಯೋ ಅವರು 1990ರ ನಂತರ 14 ವರ್ಷಗಳ ಬಳಿಕ ಅಜಿಂಕ್ಯಾ ಡಿಯೋ ಚೊಚ್ಚಲ ನಿರ್ದೇಶನದ ಜೇಟಾದೊಂದಿಗೆ ಬೆಳ್ಳಿ ಪರದೆಗೆ ಮರಳಿದರು. ಸೀಮಾ ಅವರ ಕಿರಿಯ ಮಗ ಖ್ಯಾತ ನಿರ್ದೇಶಕ ಅಭಿನಯ್ ಡಿಯೋ ಅವರು ಡೆಲ್ಲಿ ಬೆಲ್ಲಿ, ಪೋರ್ಸ್ 2 ಮತ್ತು ಬ್ಲ್ಯಾಕ್ಮೇಲ್ನಂತಹ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.ಅಜಿಂಕ್ಯಾ ಅವರು ಎಕ್ಸ್ನಲ್ಲಿ “ನನ್ನ ತಾಯಿ, ಮರಾಠಿ ಚಿತ್ರರಂಗದ ಹಿರಿಯ ನಟಿ ಸೀಮಾ ಡಿಯೋ ಅವರು ಆಲ್ಝೈಮರ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ನಮ್ಮ ಇಡೀ ಡಿಯೋ ಕುಟುಂಬವು ಅವರು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ. ಅವರನ್ನು ಪ್ರೀತಿಸಿದ ಸಮಸ್ತ ಮಹಾರಾಷ್ಟ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ. ಅವರ ಆರೋಗ್ಯಕ್ಕಾಗಿ ಹೆಚ್ಚು ಪ್ರಾರ್ಥಿಸಿ” ಎಂದು ಬರೆದು ಕೊಂಡಿದ್ದರು.