ತಲೆಸುತ್ತು ತುಂಬಾ ಮಂದಿಗೆ ಕಾಡುವ ಸಾಮಾನ್ಯ ಕಾಯಿಲೆ. ಈ ಕಾಯಿಲೆಯನ್ನು ನಿಯಂತ್ರಿಸೋದು ಹೇಗೆ?ಎನ್ನುವ ಕುರಿತು ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಮಾಹಿತಿ ನೀಡಿದ್ದಾರೆ.
ವರ್ಟಿಗೋ( ತಲೆ ಸುತ್ತು), ಪಿತ್ತ ಅಧಿಕವಾದಾಗ ಕಾಣಿಸಿಕೊಳ್ಳುವ ಲಕ್ಷಣವಿದು.ಇದನ್ನು ಆಯುರ್ವೇದದಲ್ಲಿ ಇದನ್ನು ಭ್ರಮಾ ಎಂದು ಕರೆಯುತ್ತಾರೆ .
ಇದರ ಜೊತೆ ವಾಕರಿಕೆ, ಬೆವರುವಿಕೆ, ನಡೆಯಲು ಕಷ್ಟವಾಗುವುದು, ಈ ಲಕ್ಷಣಗಳು ಕಾಣಿಸಬಹುದು.
ವಿವಿಧ ಕಾರಣಗಳು ಹೀಗಿವೆ :
ಒಳ ಕಿವಿಯ ಇನ್ಫೆಕ್ಷನ್ ಅಥವಾ ನರಗಳಲ್ಲಿ ತೊಂದರೆ ಇದ್ದಾಗ ಹೆಚ್ಚಾಗಿ ಕಾಣಿಸಿಕೊಳ್ಳುವುದು .ಇತರ ಕಾರಣಗಳು ಎಪಿಲೆಪ್ಸಿ ,ಬ್ರೇನ್ ಟ್ಯೂಮರ್, ನಿದ್ರಾಹೀನತೆ, ಮೈಗ್ರೇನ್
ತಲೆ ಸುತ್ತು ಬಂದಾಗ ಹೀಗೆ ಮಾಡಿ:
ಕುಳಿತುಕೊಳ್ಳಿ, ಡ್ರೈವ್ ಮಾಡಬೇಡಿ, ಮೆಟ್ಟಿಲನ್ನು ಏರಬೇಡಿ, ಭಾರದ ವಸ್ತುಗಳನ್ನು ಎತ್ತಬೇಡಿ, ನಡೆಯಲು ಕಷ್ಟವಾದಾಗ ವಾಕಿಂಗ್ ಸ್ಟಿಕ್ ಅನ್ನು ಬಳಸಿ. ನಿಮ್ಮ ಬ್ಯಾಗ್ ನಲ್ಲಿ ಸದಾ ನೆಲಗಡಲೆ ಚಿಕ್ಕಿ, ಸ್ವಲ್ಪ ಬಾದಾಮಿ ಇಟ್ಟುಕೊಳ್ಳಿ ತಲೆ ಸುತ್ತು ಬಂದಾಗ ತಿಂದರಾಯ್ತು.
ಇಷ್ಟನ್ನು ಮಾಡಲೇಬೇಕು:
*ಒಳ್ಳೆಯ ನಿದ್ದೆ ಮಾಡಿ, ತಲೆದಿಂಬನ್ನು ಬಳಸಬೇಡಿ, ಚಿಂತೆಯಿಂದ ದೂರವಿರಿ,
*ಬಿಪಿ ಹತೋಟಿಯಲ್ಲಿ ಇರಲಿ, ಐರೊಟೇಷನ್ ಎಕ್ಸಸೈಸ್ ಮಾಡಿ, ವಿಟಮಿನ್ ಹಾಗೂ ಅಯನ್ ಸಪ್ಲಿಮೆಂಟ್ ಸೇವಿಸಿ, ಕಂಪ್ಯೂಟರ್ ಬಳಸಬೇಡಿ, ಬೇಡದ ಚಿಂತೆಯಿಂದ ದೂರವಿರಿ.
*ಆರೋಗ್ಯಕರ ಆಹಾರ ಸೇವಿಸಿ, ಮೂರು ಗ್ಲಾಸ್ ತಣ್ಣಗಿನ ನೀರು ಕುಡಿಯಿರಿ, ಸಲಾಡ್, ಹರ್ಬಲ್ ಟೀ, ಒಣ ದ್ರಾಕ್ಷಿ, ಖರ್ಜೂರ ಸೇವಿಸಿ.
ಹೀಗೆ ಮಾಡಬೇಡಿ:
*ಉಪ್ಪು ,ಸಕ್ಕರೆ , ಕಾಫಿ, ಜಂಕ್ ಫುಡ್,ಮಾಂಸ, ಫ್ರಿಜ್ನಲ್ಲಿಟ್ಟ ಆಹಾರ ಧೂಮಪಾನ ತಂಬಾಕು ಮದ್ಯಪಾನ ಕಡಿಮೆ ಸೇವಿಸಿ.
ವ್ಯಾಯಾಮ ಮಾಡಿದ್ರೆ ಆರಾಮ:
*ಪ್ರಾಣಾಯಾಮ, ನಾಡಿ ಶೋಧನ ಪ್ರಾಣಾಯಾಮ, ಶಂಖ ಮುಖಿ ಮುದ್ರಾ, ಯೋಗಾಸನಗಳಲ್ಲಿ ಅರ್ಧ ಮತ್ಸೇಂದ್ರಿಯಾಸನ, ಪಶ್ಚಿಮೋತ್ತಾಸನ, ಶವಾಸನ ಮಾಡಿ.
*ಎಕ್ಸಸೈಸ್, ಆಕ್ಯುಪ್ರೆಶರ್ , ಆಕ್ಯೂಪಂಕ್ಚರಹಾಗುಹೆಡ್ ಮಸಾಜ್ ಒಳ್ಳೆಯದು .
ಮನೆ ಮದ್ದು, ತಲೆಸುತ್ತಿಗೆ ಕೊಡಿ ಗುದ್ದು:
* ಒಂದು ಗ್ಲಾಸ್ ನೀರಿಗೆ ಅರ್ಧ ನಿಂಬೆಹಣ್ಣಿನ ರಸ ಎರಡು ಚಿಟಿಕೆ ಕರಿಮೆಣಸಿನ ಪುಡಿ ಮತ್ತು ಉಪ್ಪು ಬೆರೆಸಿ ಕುಡಿಯಿರಿ.
*. ಶುಂಠಿ ರಸ ಒಂದು ಚಮಚ, ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಎರಡು ಸಲ ಊಟವಾದ ಬಳಿಕ ಒಂದು ತಿಂಗಳು ಸೇವಿಸಿ.
*. ಒಂದು ಟೀ ಸ್ಪೂನ್ ಕೊತ್ತಂಬರಿ ಬೀಜ ರಾತ್ರಿ ನೀರಿನಲ್ಲಿ ನೆನೆಸಿಡಿ, ಬೆಳಗ್ಗೆ ಅದನ್ನು ಸೋಸಿ ಅರ್ಧ ಚಮಚ ಸಕ್ಕರೆ ಬೆರೆಸಿ ಸೇವಿಸಿ.
*ರಾತ್ರಿ ನಾಲ್ಕು ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ .
* ತುಳಸಿ ಎಲೆ ಸೇವಿಸಿದರೆ ಒಳ್ಳೆಯದು .