ಸೂರ್ಯಾಸ್ತದ ನಂತರ ಬೆರಗುಗೊಳಿಸುವ ಶುಕ್ರ ಗ್ರಹ ಮತ್ತು ಪ್ರಕಾಶಮಾನ ಗುರು ಗ್ರಹ ಪರಸ್ಪರ ಹತ್ತಿರ ಬರುವುದನ್ನು ಪಶ್ಚಿಮ ಆಗಸದಲ್ಲಿ ಕಾಣಬಹುದಾಗಿದೆ. ಸೂರ್ಯಾಸ್ತದ ಬಳಿಕ ಗುರು ಮತ್ತು ಶುಕ್ರಗ್ರಹಗಳು ಹತ್ತಿರದಲ್ಲಿರುವಂತೆ ಕಂಡುಬರುತ್ತದೆ ಮತ್ತು ಸುಮಾರು 2 ಗಂಟೆಗಳ ನಂತರ ಗ್ರಹಗಳು ದಿಗಂತದಲ್ಲಿ ಕಣ್ಮರೆಯಾಗುತ್ತವೆ.
ಮಾರ್ಚ್ 1 ಶುಕ್ರವು ಗುರುಗ್ರಹದಿಂದ ಆಕಾಶದ ಮೇಲೆ 0.5 ಡಿಗ್ರಿಗಳಷ್ಟು ಹಾದುಹೋಗುತ್ತದೆ. ಎರಡೂ ಪ್ರಕಾಶಮಾನವಾದ ಗ್ರಹಗಳಾದರೂ ಶುಕ್ರವು ಗುರುವಿಗಿಂತ ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಸೂರ್ಯ ಮತ್ತು ಚಂದ್ರರ ಬಳಿಕ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ಗ್ರಹ ಶುಕ್ರ. ಬರಿಗಣ್ಣಿನಿಂದಲೂ ಕಾಣಬಹುದಾದ ಈ ಸಂಯೋಗವನ್ನು ದುರ್ಬೀನು ಇದ್ದಲ್ಲಿ ಇನ್ನೂ ಚೆನ್ನಾಗಿ ವೀಕ್ಷಿಸಬಹುದು.

ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನೊಂದಿಗೆ ಗುರು ಸಂಯೋಗವು ಹೆಚ್ಚು ಮಂಗಳಕರವೆಂದು ಭಾವಿಸಲಾಗಿದೆ. ಈ ಸಂಯೋಗವನ್ನು ಹೊಂದಿರುವ ಜನರು ಸಾಮಾನ್ಯವಾಗಿ ಧಾರ್ಮಿಕ ಮತ್ತು ಬೌದ್ಧಿಕರಾಗಿದ್ದಾರೆ. ಎರಡೂ ಗ್ರಹಗಳು ಸಂಪತ್ತಿನ ಕಾರಕವಾಗಿರುವುದರಿಂದ, ಈ ಸಂಯೋಗ ಹೊಂದಿರುವವರು ಶ್ರೀಮಂತರಾಗುತ್ತಾರೆ. ಅವರ ಜೀವನೋಪಾಯದ ಮೂಲವು ಸಾಮಾನ್ಯವಾಗಿ ಗೌರವಾನ್ವಿತ ವೃತ್ತಿಯಾಗಿರುತ್ತದೆ. ಇದಲ್ಲದೆ, ಅಂತಹ ಜನರು ನೀತಿವಂತ ಮತ್ತು ನಿಷ್ಠಾವಂತ ಪಾಲುದಾರರನ್ನು ಸಹ ಪಡೆಯುತ್ತಾರೆ.
ಗುರು ಮತ್ತು ಶುಕ್ರಗ್ರಹಗಳು ಅತ್ಯಂತ ಪ್ರಬಲ ಗ್ರಹಗಳು. ಗುರು ಮತ್ತು ಶುಕ್ರನ ಗುರುತ್ವಾಕರ್ಷಣೆಯು ಭೂಮಿಯ ಮೇಲೆ ಹವಾಮಾನ ಬದಲಾವಣೆಗಳಿಗೂ ಕಾರಣವಾಗುತ್ತದೆ.












