ಆರ್ಯುವೇದ ಎನ್ನುವುದು ಜೀವನಕ್ರಮ: ಡಾ. ಡಿ. ವೀರೇಂದ್ರ ಹೆಗ್ಗಡೆ

ಉಡುಪಿ: ಆರ್ಯುವೇದಕ್ಕೆ ಮನುಷ್ಯನ ಪಂಚೇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿಯಿದೆ.  ಆರ್ಯುವೇದವನ್ನು ಚಿಕಿತ್ಸಾ ಪದ್ಧತಿಗಿಂತಲೂ ಜೀವನ ಕ್ರಮವೆಂದು ಪರಿಗಣಿಸಲಾಗುತ್ತದೆ ಎಂದು ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಕುತ್ಪಾಡಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ   ಶನಿವಾರ ನಡೆದ ಕಾಲೇಜಿನ ವಿಶಿಖಾನುಪ್ರವೇಶ- ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಲೋಪತಿ ವೈದ್ಯಕೀಯ ಪದ್ಧತಿಯಲ್ಲಿ  ಆಹಾರದ ಕ್ರಮದಲ್ಲಿ ಯಾವುದೇ ಬದಲಾವಣೆಯನ್ನು ಅವರು ಪರಿಗಣಿಸುವುದಿಲ್ಲ. ಇದರಿಂದ ರೋಗಗಳು ಮತ್ತೆ ಉಲ್ಬಣಿಸುವ ಸಾಧ್ಯತೆಗಳಿರುತ್ತದೆ. ಆದರೆ ಆರ್ಯುವೇದದಲ್ಲಿ ಪತ್ಯೆ ಮುಖ್ಯವಾಗಿದ್ದು, ಚಿಕಿತ್ಸೆಯ ಸಂದರ್ಭದಲ್ಲಿ ದೇಹಕ್ಕೆ ಪೂರಕವಾಗುವ ಆಹಾರವನ್ನು ಮಾತ್ರ ನೀಡಲಾಗುತ್ತದೆ ಎಂದರು.
ಹೊಸ ದೆಹಲಿಯ ಸಿಸಿಆರ್‌ಎಎಸ್‌ನ ಆಡಳಿತ ನಿರ್ದೇಶಕ ಪ್ರೊ. ವೈದ್ಯ ಕರ್ತಾರ್‌ ಸಿಂಗ್‌ ಧೀಮನ್‌  ಮಾತನಾಡಿದರು. ಈ ಸಂದರ್ಭದಲ್ಲಿ ಆಯುರ್ವೇದ ಶಾಸ್ತ್ರವನ್ನು ಅರಿತು ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಸುಮಾರು ೬೪ ಸ್ನಾತಕ, ೨೦ ಸ್ನಾತಕೋತ್ತರ  ಹಾಗೂ ಇಬ್ಬರು ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರವನ್ನು ನೀಡಿ
ಗೌರವಿಸಲಾಯಿತು. ಎಸ್‌ಡಿಎಂ ಆಯುರ್ವೇದ ಏಜುಕೇಶನ್‌ ಸೊಸೈಟಿಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್‌, ಹಾಸನ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸನ್ನ ರಾವ್‌, ಆಸ್ಪತ್ರೆಯ ವೈದ್ಯಕೀಯಅಧೀಕ್ಷಕಿ ಡಾ. ಕೆ. ಮಮತಾ, ಸ್ನಾತಕೋತ್ತರ ವಿಭಾಗದ ಡೀನ್‌ ಡಾ. ನಿರಂಜನ್‌ ರಾವ್‌,ಸ್ನಾತಕ ವಿಭಾಗದ ಡೀನ್‌ ಡಾ. ಸುಚೇತ ಕುಮಾರಿ, ಹೇಮಾವತಿ ಹೆಗ್ಗಡೆ, ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಶ್ರೀನಿವಾಸ ಆಚಾರ್ಯ ಉಪಸ್ಥಿತರಿದ್ದರು.