ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಸಂತೋತ್ಸವ

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ವಸಂತ ಮಾಸದ ಕೊನೆಯ ದಿನ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ, ಭಜನಾ ಕಾರ್ಯಕ್ರಮ, ವಸಂತ ಪೂಜೆ, ಅಷ್ಟಾವಧಾನ ಸೇವೆ, ಲಾಲ್ಕಿ ಉತ್ಸವ ಹಾಗೂ ಪಲ್ಲಕಿ ಉತ್ಸವ ನಡೆಯಿತು. ಪ್ರತಿ ವರುಷದಂತೆ ಸ್ವಯಂಸೇವಕರು ಮತ್ತು ಜಿ.ಎಸ್.ಬಿ ಯುವಕ ಮಂಡಳಿಯ ವತಿಯಿಂದ ವಸಂತೋತ್ಸವವು ಸಂಭ್ರಮದಿಂದ ಜರುಗಿತು.

ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವಿನಾಯಕ ಭಟ್ ನೆರವೇರಿಸಿದರು. ದೇವಳದ ಆಡಳಿತ ಮೊಕೇಸರ ಪಿ ವಿ ಶೆಣೈ, ವಿಶ್ವನಾಥ ಭಟ್ , ಗಣೇಶ ಕಿಣಿ, ವಿಶಾಲ್ ಶೆಣೈ, ನರಹರಿ ಪೈ, ದೀಪಕ್ ಭಟ್, ಪ್ರಕಾಶ ಶೆಣೈ , ಜಿ ಎಸ್ ಬಿ, ಯುವಕ ಮಂಡಳಿ ಅಧ್ಯಕ್ಷ ನಿತೇಶ್ ಶೆಣೈ, ಪ್ರದೀಪ್ ರಾವ್, ಜಿ ಎಸ್ ಬಿ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.