ಉಡುಪಿ: ಉಡುಪಿ ದೈವಜ್ಞ ಬ್ರಾಹ್ಮಣ ಸಂಘದ ಮಹಿಳಾ ಮಂಡಳಿಯ ವತಿಯಿಂದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯನ್ನು ಉಡುಪಿ ಒಳಕಾಡಿನ ದೈವಜ್ಞ ಮಂದಿರದಲ್ಲಿ ನೆರವೇರಿಸಲಾಯಿತು.

ವೇದ ಮೂರ್ತಿ ವಾಸುದೇವ ಉಪಾಧ್ಯಾಯ ಧಾರ್ಮಿಕ ಪೂಜೆಗಳನ್ನು ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆ , ಕಳಶ ಪ್ರತಿಷ್ಠೆ, ಸಾಮೂಹಿಕ ಕುಂಕುಮ ಅರ್ಚನೆ, ಲಲಿತಾ ಸಹಸ್ರನಾಮ ಪಠಣ, ಭಜನಾ ಕಾರ್ಯಕ್ರಮ, ಮಹಾಪೂಜೆ ನಡೆಯಿತು.
ಪೂಜಾ ಕಾರ್ಯದಲ್ಲಿ ರಾಜೇಶ್ ಶೇಟ್ , ಸುಮನಾ ಶೇಟ್ ಸಹಕರಿಸಿದರು. ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಎಸ್ ಸುಬ್ರಮಣ್ಯ ಶೇಟ್ , ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಅಧ್ಯಕ್ಷೆ ಕಲ್ಪನಾ ಶೇಟ್ , ಕಾರ್ಯದರ್ಶಿ ಜಯಶ್ರೀ ಶೇಟ್ ಇದ್ದರು.












