ನಾಳೆ ವಾಲೆಂಟೆನ್ಸ್ ಡೇ ಸಂಭ್ರಮ, ವಿಶ್ವದೆಲ್ಲೆಡೆ ಈ ದಿನವನ್ನು ಆಚರಿಸುವ ಪ್ರೇಮಿಗಳಿಗೇನೂ ಕಡಿಮೆ ಇಲ್ಲ. ಇತ್ತೀಚೆಗೆ ಪ್ರೇಮಿಗಳ ದಿನಾಚರಣೆಯಂದು ತಮ್ಮ ಪ್ರೀತಿಯ ಹುಡುಗ/ಹುಡುಗಿಗೆ ಪ್ರಪೋಸ್ ಮಾಡುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಹೆಚ್ಚಿನ ಮಂದಿ ತಮ್ಮಲ್ಲಿ ಇಷ್ಟು ದಿನ ಮುಚ್ಚಿಟ್ಟುಕೊಂಡ ಪ್ರೇಮ ನಿವೇದನೆಯನ್ನು ಪ್ರೇಮಿಗಳ ದಿನದಂದು ನಿವೇದಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಒಂದು ಅಂಶ ಬಹಿರಂಗವಾಗಿದೆ ಅದೇನಂದ್ರೆ ಪ್ರೇಮಿಗಳ ದಿನಾಚರಣೆ ಇತ್ತೀಚೆಗೆ ಯಾಂತ್ರಿಕವಾಗಿದ್ದು ಆ ದಿನಕ್ಕೆ ಬೆಲೆಯೇ ಇಲ್ಲವಾಗಿದೆ. ಪ್ರೇಮಕ್ಕಿಂತಲೂ ಜಾಸ್ತಿ ಬೆಲೆ ಪ್ರೇಮಿಗೆ ಕೊಡುವ ದುಬಾರಿ ಗಿಫ್ಟ್ ನದ್ದಾಗಿದೆ.ಯುವಜನರು ಪ್ರೇಮಿಗಳ ಎದುರು ಪ್ರೇಮ ನಿವೇದಿಸಿಕೊಳ್ಳಲು ದುಬಾರಿ ಗಿಫ್ಟ್ ಗಳ ಹಿಂದೆ ಹೋಗುತ್ತಿದ್ದು ಇಲ್ಲಿ ಪ್ರೀತಿಯೊಂದು ಬಿಟ್ಟು ಉಳಿದಿದ್ದೆಲ್ಲವೂ ವಿನಿಮಯವಾಗುತ್ತಿದೆ. ನೀವು ಮದುವೆಯಾಗಿದ್ರೂ ನಿಮ್ಮ ಗಂಡ/ ಹೆಂಡತಿ ನಿಮಗೆ ಪ್ರೇಮಿಯೇ. ಹಾಗಾಗಿ ಪ್ರೇಮಿಗಳ ದಿನಾಚರಣೆಯಂದು ಅವರಿಗೂ ನೀವು ಖುಷಿ ಕೊಡಬೇಕು,
ಹೊಸದಾಗಿ ಪ್ರಪೋಸ್ ಮಾಡುವವರಿಗೆ, ಈಗಾಗಲೇ ಜೊತೆಗಿರುವ ಜೋಡಿ ನಾವು ಹೇಳಿರುವ ಟಿಪ್ಸ್ ಫಾಲೋ ಮಾಡಲು ಮರಿಬೇಡಿ.
*ಎಲ್ಲರಂತೆ ನಾನಲ್ಲ, ನಾನು ಬರೀ ವಾಲೆಂಟೆನ್ಸ್ ದಿನದ ಪ್ರೇಮಿಯಲ್ಲ, ಪ್ರತೀ ದಿನವೂ ನಿನ್ ಜೊತೆಗಿರುವ ಆಸೆ ಎಂದು ವಾಲೆಟೆನ್ಸ್ ಡೇ ಗೆ ಮಾತ್ರ ನಮ್ಮ ಪ್ರೀತಿ ಸೀಮಿತವಲ್ಲ ಎಂದು ಪ್ರೀತಿಯಿಂದಲೇ ಹೇಳಿ
*ಪ್ರೀತಿಯ ಮುಂದೆ ಯಾವ ಉಡುಗೊರೆಗಳಿಗೂ ಬೆಲೆಯಿಲ್ಲ, ನನ್ನ ಪ್ರೀತಿಯನ್ನು ಉಡುಗೊರೆ ಮೂಲಕ ಅಳೆಯಬೇಡ ಪ್ರೀತಿಯನ್ನು ಪ್ರೀತಿಯಿಂದಲೇ ಅಳೆ ಆದರೂ ನಿಮಗೊಂದು ಪ್ರೀತಿಯ ಕಾಣಿಕೆ ಎಂದು ಪುಟ್ಟದ್ದೊಂದು ಪತ್ರವನ್ನೋ, ಅರ್ಥಪೂರ್ಣ ಗಿಫ್ಟ್ ಅನ್ನೋ ಕೊಟ್ಟರೆ ಸಾಕು
*ನೀವು ಪ್ರೇಮ ನಿವೇದಿಸಿಕೊಂಡ ವ್ಯಕ್ತಿ ನಿಜಕ್ಕೂ ನಿಮ್ಮ ಇಷ್ಟಪಡುತ್ತಾರಾದರೆ, ನೀವು ಹಾಗೆ ಹೇಳಿದ್ದು ಅವರಿಗೆ ಇಷ್ಟವಾಗಿದೆ ಎಂದಾದರೆ ಅದು ಅವರ ನಗುವಿನಲ್ಲೇ ವ್ಯಕ್ತವಾಗುತ್ತದೆ, ಹಾಗಾಗಿ ನಿಮ್ಮ ಪ್ರೇಮಿಯನ್ನು ಸೂಕ್ಷ್ಮವಾಗಿ ಗಮನಿಸಿ
*ಪ್ರೇಮಿಗಳ ದಿನ ಏನಾದರೂ ಒಂದು ಧ್ಯೇಯ (ಮೋಟೋ)ವನ್ನು ಹಾಕಿ “ಜೀವನದ ಪ್ರತೀ ದಿನವೂ ಖುಷಿಯಿಂದ ಇಬ್ಬರೂ ಬದುಕಬೇಕು, ನಮ್ಮನ್ನು ನಾವು ಅರ್ಥ ಮಾಡಿಕೊಂಡು ಬದುಕಬೇಕು, ಹೀಗೇ ಏನಾದರೂ ಮೋಟೋ ಹಾಕಿ

*ನೀವು ಪ್ರೀತಿಸಿ ಮದುವೆಯಾದವರಾದರೆ ಮೊದಲು ಭೇಟಿಯಾದ, ಮುತ್ತುಕೊಟ್ಟ ಮದುವೆಯ ಮೊದಲ ದಿನಗಳನ್ನು ಒಟ್ಟಿಗೇ ಕೂತು ಮೆಲುಕು ಹಾಕಿ
*ಚೆಂದದ ಪರಿಸರ ಗಾರ್ಡನ್, ಫಾಲ್ಸ್, ಬೀಚ್, ನದಿ, ಕಾಡು ದಾರಿ ಇವುಗಳ ನಡುವೆ ಪ್ರೀತಿ ಅರಳುತ್ತದೆ ಹಾಗಾಗಿ ಇಂತಹ ಜಾಗದಲ್ಲಿ ನಿಮ್ಮ ಪ್ರೀತಿಪಾತ್ರರ ಜೊತೆಗೆ ಪ್ರೇಮಿಗಳ ದಿನವನ್ನು ಕಳೆಯಿರಿ
ಆಸ್ತಿ, ಅಂತಸ್ತು,ಮಕ್ಕಳು, ಚಿನ್ನ, ಬೆಳ್ಳಿ ಇವುಗಳೆಲ್ಲವನ್ನೂ ಮೀರಿದ್ದು ಪ್ರೀತಿ, ಖುಷಿಯಿಂದ ಬಾಳಲು ಒಂದಷ್ಟು ಹಣ ಸಾಕು, ಇಬ್ಬರೂ ಪ್ರೀತಿಯಿಂದ ಬದುಕಿದ್ದರೆ ಬದುಕಲ್ಲಿ ಎಲ್ಲವೂ ಸಿಗುತ್ತೆ ಎನ್ನುವುದನ್ನು ನಿಮ್ಮ ಪ್ರೀತಿಯ ಜೀವಕ್ಕೆ ಮನವರಿಕೆ ಮಾಡಿ
*ನಿಮ್ಮ ಪ್ರೇಮಿಯ ಅಂದ ಚೆಂದವನ್ನು ಸಹಜವಾಗಿ ಹೊಗಳಿ. ಮುಚ್ಚುಮರೆಯಿಲ್ಲದೇ ಭಾವನೆ ಹಂಚಿಕೊಳ್ಳಿ, ಹೊಗಳಿದರೆ ಯಾರಿಗೆ ತಾನೇ ಇಷ್ಟವಾಗಲ್ಲ, ಚೆಂದದ ಹೊಗಳಿಕೆ ಪ್ರೀತಿಯನ್ನು ದುಪ್ಪಟ್ಟುಮಾಡುತ್ತೆ.













