ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗಿದರೆ ಸಕ್ಸಸ್ ಗ್ಯಾರಂಟಿ: ಪಂ.ವಾದಿರಾಜ್ ಭಟ್ಟರು ಹೇಳಿದ ರಾಶಿಫಲ

ಶ್ರೀ ಕಾಳಿಕಾದುರ್ಗಾಜ್ಯೋತಿಷ್ಯಂ
ಪಂಡಿತ್;: ವಾದಿರಾಜ್ ಭಟ್
9743666601

ಮೇಷ:- ಹಿರಿಯರನ್ನು ನಂಬಿ ಮನಬಿಚ್ಚಿ ಮಾತನಾಡಿ. ನಿಮ್ಮಲ್ಲಿರುವ ಒತ್ತಡಗಳಿಗೆ ಆ ಮೂಲಕ ಮುಕ್ತಿಯನ್ನು ನೀಡಿ ಮತ್ತು ನೀವು ನಿರಮ್ಮಳರಾಗಿ. ಇಂದಿನ ಕಾರ್ಯಗಳು ದೈವಕೃಪೆಯಿಂದ ಸುಲಭವಾಗಿ ಮುಕ್ತಾಯ ಹಂತ ತಲುಪುವುದು.

ವೃಷಭ:
ವೃಷಭ:- ಅನ್ಯಮನಸ್ಕತೆ, ಚಾಂಚಲ್ಯದ ಚಿತ್ತವನ್ನು ಬಿಟ್ಟು ಬಿಡಿ. ಹೊಸ ತಂತ್ರಗಳಿಂದ ಕಾರ್ಯ ಆರಂಭಿಸಿದಲ್ಲಿ ಗೆಲುವು ನಿಮ್ಮದಾಗುವುದು. ಗುರುವಿನ ಮಂತ್ರವನ್ನು ತಪ್ಪದೆ ಪಠಿಸಿ.

ಮಿಥುನ:- ನಿಮ್ಮ ದಾರಿ ಬಿಟ್ಟು ಅನ್ಯ ಮಾರ್ಗ ಹಿಡಿಯಲು ಹೋಗದಿರಿ. ಇದರಿಂದ ನೀವು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಗುರುವಿನ ಬೆಂಬಲ ನಿಮಗೆ ಇರುವುದರಿಂದ ಹೆಚ್ಚಿನ ತೊಂದರೆ ಆಗುವುದಿಲ್ಲ.

ಕಟಕ:- ಇರುವುದನ್ನು ಬಿಟ್ಟು ಇಲ್ಲದಿರುವುದರತ್ತ ಗಮನ ಹರಿಸಬೇಡಿ. ನೂರೆಂಟು ಕಡೆ ಗುಂಡಿ ಅಗೆಯುವುದಕ್ಕಿಂತ ಒಂದೇ ಕಡೆ ಆಳವಾದ ಗುಂಡಿ ತೆಗೆದಲ್ಲಿ ನೀರು ದೊರೆಯಲು ಸಾಧ್ಯವಾಗುತ್ತದೆ. ಹಾಗಾಗಿ ಒಂದೇ ಕಡೆ ಗಮನವನ್ನು ಕೇಂದ್ರೀಕರಿಸಿ.

ಸಿಂಹ:- ಶ್ರಮ ಪಡುವಂತಹ ವಿಚಾರಗಳು ನಿಮಗೆ ಹೊಸತೇನಲ್ಲ. ಧೈರ್ಯದಿಂದ ಮುನ್ನುಗ್ಗಿ. ಯಶಸ್ಸಿಗೆ ಅನೇಕ ದಾರಿಗಳಿವೆ. ನಿಮ್ಮ ಯಶಸ್ಸನ್ನು ಕಂಡು ಇತರರಿಗೆ ಅಸೂಯೆ ಉಂಟಾಗುವುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಕೈಬಿಗಿ ಹಿಡಿಯುವುದು ಒಳ್ಳೆಯದು.

ಕನ್ಯಾ:- ನಿಮ್ಮ ಪರೋಪಕಾರಿ ಗುಣವನ್ನು ಮುಕ್ತ ಕಂಠದಿಂದ ಪ್ರಶಂಸಿಸುವಂತಹ ಜನರು ನಿಮ್ಮನ್ನು ಭೇಟಿ ಆಗಲಿದ್ದಾರೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಗಣಪತಿಯ ಪ್ರಭಾವ ಹೆಚ್ಚಿನದಾಗಿದ್ದು ಆತನ ಒಲುಮೆಯಿಂದ ಕ್ಲಿಷ್ಟಕರ ಸನ್ನಿವೇಶಗಳು ಕರಗುವುದು.

ತುಲಾ:- ಕುಟುಂಬದ ಸದಸ್ಯರೊಡನೆ ದೂರ ಪ್ರವಾಸ ಮಾಡುವ ಸಾಧ್ಯತೆ ಇದೆ. ಇದರಿಂದ ನಗರದ ಜಂಜಾಟದಿಂದ ಕೆಲ ಸಮಯ ದೂರವಿದ್ದು ಮನಸ್ಸಿಗೆ ನೆಮ್ಮದಿ ಉಂಟಾಗುವ ಸಾಧ್ಯತೆ ಇರುತ್ತದೆ. ಕುಲದೇವರ ಅರ್ಚನೆ ಮಾಡಿಸಿ.

ವೃಶ್ಚಿಕ:- ಜೂಜು, ರೇಸು, ಲಾಟರಿ ಎಂದು ಗ್ಯಾಂಬ್ಲಿಂಗ್‌ ಚಟುವಟಿಕೆಗಳಲ್ಲಿ ಹಣ ಹೂಡಿ ಕಳೆದುಕೊಳ್ಳದಿರಿ. ಕೂಡಿಟ್ಟ ಹಣ ಮುಂದಿನ ದಿನಗಳಿಗೆ ಸಹಾಯ ಮಾಡುವುದು. ಆಂಜನೇಯ ಸ್ತೋತ್ರವನ್ನು ಪಠಿಸಿ.

ಧನಸ್ಸು:- ದೂರ ಪ್ರದೇಶದ ಪ್ರಯಾಣದ ಅವಕಾಶ ನಿಮಗೆ ಬರಲಿದೆ. ಇದರಿಂದ ನಿಮ್ಮ ವೈಯಕ್ತಿಕ ಬದುಕಿಗೂ ಸಹಾಯವಾಗುವುದು ಮತ್ತು ಹಣಕಾಸು ಕೂಡಾ ಬರುವುದು.

ಮಕರ:- ಇತ್ತೀಚಿನ ದಿನಗಳ ವೈಫಲ್ಯಗಳ ಬಗ್ಗೆ ಯೋಚನೆ ಹೆಚ್ಚಾಗಿದೆ. ಈ ಬಗ್ಗೆ ಯೋಚಿಸದೇ ಹೊಸ ಉತ್ಸಾಹದಿಂದ ಕಾರ್ಯ ಆರಂಭಿಸಿ. ಇದರಿಂದ ಹೆಚ್ಚಿನ ಹಣಕಾಸು ಬರುವುದು. ಮಾನಸಿಕ ನೆಮ್ಮದಿ ದೊರೆಯುವುದು.

ಕುಂಭ:- ವಿವಾಹ ಯೋಗ್ಯ ವಧು, ವರರಿಗೆ ಸೂಕ್ತ ಸಂಗಾತಿ ದೊರೆಯುವ ಸಾಧ್ಯತೆ ಇದೆ. ಕೌಟುಂಬಿಕ ಜೀವನದಲ್ಲಿ ಉತ್ತಮ ದಿನಗಳನ್ನು ಕಾಣುವಿರಿ. ಬಹುದಿನದ ಆಸೆ ನೆರವೇರುವುದು.

ಮೀನ:- ನಡೆಯುವ ಮನುಜ ಎಡುವುವನು. ಅಂತೆಯೇ ಕೆಲವು ಕಾರ್ಯಗಳಲ್ಲಿ ತಪ್ಪು ನುಸುಳುವುದು ಸಹಜ. ಆದರೆ ಅದರ ಬಗ್ಗೆ ಹೆಚ್ಚು ಚಿಂತಿಸದೆ ಮುಂದಿನ ಕಾರ್ಯಗಳ ಬಗ್ಗೆ ಚಿಂತಿಸುವುದು ಒಳ್ಳೆಯದು.

ಶ್ರೀ ಕಾಳಿಕಾದುರ್ಗಾಜ್ಯೋತಿಷ್ಯಂ
ಪಂಡಿತ್;: ವಾದಿರಾಜ್ ಭಟ್
974366660