ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಪಂಡಿತ್ ::ವಾದಿರಾಜ್ ಭಟ್
9743666601
ಮೇಷ:- ನೀವು ಸಾಮಾಜಿಕವಾಗಿ ನಡೆಸಲಿರುವಂತಹ ಚಟುವಟಿಕೆಗಳಿಂದ ಒತ್ತಡವಿದ್ದರು ಅದು ಸಂತೋಷವನ್ನುಂಟು ಮಾಡುವುದು. ಜ್ಞಾನದ ಸಂವರ್ಧನೆಗಳಿಗಾಗಿ ಪ್ರವಾಸವನ್ನು ಕೈಗೊಳ್ಳುವಿರಿ. ಇದಕ್ಕೆ ಪೂರಕವಾಗಿ ಹಣಕಾಸು ಬರುವುದು.
ವೃಷಭ:- ವಾಹನಗಳನ್ನು ಓಡಿಸುವಾಗ ಹೆಚ್ಚಿನ ಕಾಳಜಿ ಇರಲಿ. ನಿರ್ಲಕ್ಷ ್ಯ ವಹಿಸಿದರೆ ತೊಂದರೆಗಳು ಹೆಚ್ಚು. ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ ಕಂಡು ಬರುವುದು. ಗುರುರಾಯರ ಸ್ಮರಿಸಿ ದಿನವನ್ನು ಆರಂಭಿಸಿ.
ಮಿಥುನ:- ಸದಾ ಪಾದರಸದಂತೆ ಚುರುಕಾಗಿರುವ ನಿಮ್ಮನ್ನು ಕಂಡು ಹಲವರಿಗೆ ಅಚ್ಚರಿ. ನಿಮ್ಮ ಈ ಉತ್ಸಾಹಶೀಲತೆಯನ್ನು ಮೆಚ್ಚಿ ಹಲವರಿಂದ ಪ್ರಶಂಸೆಗೆ ಒಳಗಾಗುವಿರಿ. ವಿವಿಧ ಮೂಲಗಳಿಂದ ಹಣಕಾಸು ಬರುವುದು.
ಕಟಕ:- ಮನೆಮಂದಿಯನ್ನು ದೇವಾಲಯಗಳಿಗೆ ಕರೆದುಕೊಂಡ ಹೋಗಿ ಬನ್ನಿ. ಈ ದಿನದ ಹೆಚ್ಚಿನ ಸಮಯವನ್ನು ಮನೆಮಂದಿಯ ಸದಸ್ಯರಿಗಾಗಿ ಮೀಸಲಿಡಿ. ಇದರಿಂದ ಮನೆಯ ಸದಸ್ಯರು ಸಂತೋಷವನ್ನು ಹೊಂದುವರು.
ಸಿಂಹ:- ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಕತ್ತಲು ಇದೇ ಎಂದು ಕೊರಗುವುದರಲ್ಲಿ ಅರ್ಥವಿಲ್ಲ. ಕತ್ತಲಿನಲ್ಲಿ ನಕ್ಷ ತ್ರಗಳನ್ನು ಕಾಣುವ ಸುಯೋಗ ನಿಮ್ಮದಾಗುವುದು. ಅಂತೆಯೆ ಬಾಳಿನಲ್ಲಿ ಒಂದು ಹೊಸ ಆಶಾಕಿರಣ ಮೂಡುವುದು.
ಕನ್ಯಾ:- ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯ ನಿಮಗೆ ಗೌರವ ಮತ್ತು ಪ್ರಶಂಸೆಗಳನ್ನು ತಂದುಕೊಡುವುದು. ಸಾಲದ ತೀರುವಳಿಗಾಗಿ ನೀವು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳುವಿರಿ.
ತುಲಾ:- ನಿಮ್ಮ ಮನೆ ದೇವರನ್ನು ಗೌರವ ಪೂರ್ವಕವಾಗಿ ನಂಬಿ ಸ್ತುತಿಸಿ. ಮನೆಯ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಕಂಡುಬರಲಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಇಂದೇ ಯೋಜನೆಗಳನ್ನು ರೂಪಿಸುವುದು ಒಳ್ಳೆಯದು.
ವೃಶ್ಚಿಕ:- ಒಂದು ಪಕ್ಕಾ ಆದ ದೊಡ್ಡ ವಹಿವಾಟುವೊಂದನ್ನು ನಿಭಾಯಿಸುವ ಜವಾಬ್ದಾರಿ ನಿಮ್ಮದಾಗುವುದು. ದಿನದಿಂದ ದಿನಕ್ಕೆ ನಿಮ್ಮ ಕೀರ್ತಿ ಮುಗಿಲೆತ್ತರಕ್ಕೆ ಏರುವುದು. ಹಾಗಂತ ಅಹಂಕಾರ ಪಡುವುದು ಸೂಕ್ತವಲ್ಲ.
ಧನಸ್ಸು:- ಅತ್ಯಂತ ನಂಬುಗೆಗೆ ಪಾತ್ರರಾದ ಸ್ನೇಹಿತರು, ಬಂಧುಗಳೇ ನಿಮಗೆ ಹಣಕಾಸಿನ ವಿಷಯದಲ್ಲಿ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ನಿಮ್ಮ ಮನೆ ಕುಲದೇವರನ್ನು ಭಜಿಸಿ.
ಮಕರ:- ಬೆಳ್ಳಗಿರುವುದೆಲ್ಲಾ ಹಾಲು ಎಂದು ಭ್ರಮಿಸಿ ಮೋಸ ಹೋಗದಿರಿ. ವ್ಯವಹಾರದಲ್ಲಿ ನಿಮ್ಮ ಬುದ್ಧಿಚಾತುರ್ಯವನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಿ. ಕೆಲವೊಮ್ಮೆ ವ್ಯವಹಾರದಲ್ಲಿ ನಿಷ್ಠೂರತೆ ಫಲ ಕೊಡುವುದು.
ಕುಂಭ:- ಟೀಕಿಸುವ ಜನರ ಬಗ್ಗೆ ಆತಂಕ ಪಡಬೇಕಾಗಿಲ್ಲ. ಹೊಗಳುವ ಜನರೇ ನಿಮಗೆ ಆತಂಕ ಉಂಟು ಮಾಡುವ ಸಂದರ್ಭವಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಮೀನ:- ಗಡಿಬಿಡಿಯು ನಿಮ್ಮ ಕೆಲಸದಲ್ಲಿ ಅನಾನುಕೂಲತೆಯನ್ನು ಉಂಟು ಮಾಡುವುದು. ಸಾವಧಾನವಾಗಿ ಚಿಂತಿಸಿ ಕಾರ್ಯ ಪ್ರವೃತ್ತರಾಗುವುದರಿಂದ ಒಳಿತಾಗುವುದು. ದೂರದ ಹಳೆಯ ಗೆಳೆಯನ ಭೇಟಿ ಸಾಧ್ಯತೆ ಇದೆ.
ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಪಂಡಿತ್ ::ವಾದಿರಾಜ್ ಭಟ್
974366660