ಮಂಗಳೂರು: ಜಿಲ್ಲಾಡಳಿತವು ಕೆನರಾ ಬ್ಯಾಂಕ್‌ನ ಮಂಗಳೂರು ವಲಯ ಕಚೇರಿಯಲ್ಲಿ ಆಯೋಜಿಸಿದ್ದ ಬ್ಯಾಂಕರ‍್ಸ್‌ಗಳಿಗೆ ಲಸಿಕೆ ಅಭಿಯಾನಕ್ಕೆ ಬುಧವಾರ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿ ಕೋವಿಡ್ ತೀವ್ರ ಸಂದರ್ಭದಲ್ಲೂ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಬ್ಯಾಂಕರ‍್ಸ್ ನವರು ಸೇವೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಆಧ್ಯತಾ ನೆಲೆಯಲ್ಲಿ ಲಸಿಕೆ ನೀಡಲು ಯೋಜನೆ ಹಾಕಿಕೊಂಡಿದೆ. ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಇರುವುದರಿಂದ ಹೆಚ್ಚು ಸುರಕ್ಷಿತಾ ಕ್ರಮ ಕೈಗೊಳ್ಳಬೇಕು. ಹೆಚ್ಚು ಜಾಗೃತರಾಗಬೇಕು ಎಂದರು.
ಬ್ಯಾಂಕ್‌ನ ಮಹಾಪ್ರಬಂಧಕ ಬಿ.ಯೋಗೀಶ್ ಆಚಾರ್ಯ, ಉಪಮಹಾಪ್ರಬಂಧಕ ರಾಘವ ನಾಯ್ಕ್, ಸುಚಿತ್ರಾ ಎಸ್., ಲೀಡ್ ಬ್ಯಾಂಕ್ ಪ್ರಬಂಧಕ ಪ್ರವೀಣ್ ಎಂ.ಪಿ. ಉಪಸ್ಥಿತರಿದ್ದರು.
ಕೋವಿಡ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಅಗತ್ಯ ಇರುವ ೨೨ ಲಕ್ಷ ರೂ. ವೆಚ್ಚದಲ್ಲಿ ಆಕ್ಸಿಜನ್ ಜನರೇಟರ್ ಒದಗಿಸುವುದಕ್ಕೆ ಕೆನರಾ ಬ್ಯಾಂಕ್‌ಗೆ ಅಭಿನಂದಿಸಲಾಯಿತು.
ಬ್ಯಾಂಕ್‌ನ ಸಿಬ್ಬಂದಿಗಳಿಗೆ ಆಧ್ಯತಾ ಕ್ಷೇತ್ರವಾಗಿ ಪರಿಗಣಿಸಿ ಲಸಿಕೆ ಹಾಕಿರುವುದಕ್ಕೆ ಬ್ಯಾಂಕ್‌ನ ಮಹಾಪ್ರಬಂಧಕ ಯೋಗೀಶ್ ಆಚಾರ್ಯ ಅವರು ಜಿಲ್ಲಾಡಳಿತ ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರನ್ನು ಅಭಿನಂದಿಸಿದರು. ಯಾವುದೇ ಸಂದಿಗ್ಧ ಸ್ಥಿತಿ ಇದ್ದರೂ ಬ್ಯಾಂಕ್ ತನ್ನ ಸೇವೆಯನ್ನು ಮಾಡಲಿದೆ. ಇದೇ ವೇಳೆ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ ಭಾಗವಾಗಿ ಮಾಸ್ಕ್, ಡಿಜಿಟಲ್ ಥರ್ಮೋ ಮೀಟರ್, ಆಕ್ಸಿಮೀಟರ್ ಅನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.