ಡಾ.ಉಷಾಪ್ರಭಾ ಎನ್. ನಾಯಕ್‌ ಅವರಿಗೆ ಗೌಡ ಸಾರಸ್ವತ ಮಹಿಳಾ ವೃಂದ ಗೌರವ ಪುರಸ್ಕಾರ

ಮಂಗಳೂರು:  ವಿಶ್ವಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ನಗರದ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾಎನ್. ನಾಯಕ್‌ ಅವರಿಗೆ ಗೌಡ ಸಾರಸ್ವತ ಮಹಿಳಾ ವೃಂದ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರಕ್ಕೆ ಸಮಗ್ರವಾಗಿ ಕೊಡುಗೆ ನೀಡಿರುವುದಕ್ಕಾಗಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪುರಸ್ಕಾರ ನೀಡಲಾಯಿತು.

ಬೆಂಗಳೂರು ಕಾಶಿ ಮಠದ ಅಧ್ಯಕ್ಷ ಡಾ.ಪಿ.ದಯಾನಂದ ಪೈ, ಗೌಡ ಸಾರಸ್ವತ ಮಹಿಳಾ ವೃಂದದ ಉಪಾಧ್ಯಕ್ಷೆ ಮೋಹಿನಿ ಡಿ. ಪೈ, ಅಧ್ಯಕ್ಷೆ  ವಸುಧಾ ಪಿ.ಕಾಮತ್, ಜಿಎಸ್‌ಎಸ್ ಸಮಾಜದ ಅಧ್ಯಕ್ಷ ಜಿ.ಜಿ. ಶೆಣೈ, ಗೌಡ ಸಾರಸ್ವತ ಮಹಿಳಾ ವೃಂದದ ಸ್ಥಾಪಕ ಸದಸ್ಯೆ ಸಬಿತಾಎಸ್. ಪೈ ಉಪಸ್ಥಿತರಿದ್ದರು.