ಎಳನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭ ಉಂಟು ಗೊತ್ತಾ? ಒಮ್ಮೆ ಕೇಳಿ ಎಳನೀರಿನ ಗುಟ್ಟು

ಎಳನೀರಾ? ಬೇಡ ಅದಕ್ಕಿಂತ ಪೆಪ್ಸಿ ಚೆನ್ನಾಗಿರುತ್ತೆ ಅಂತ ಎಳನೀರಿನ ಉಸಾಬರಿಗೆ ಹೋಗದೇ ಇರುವವರೇ ಜಾಸ್ತಿ. ಅಂತವರು ಇಲ್ಲಿ ಕೇಳಿ. ನೀವು ಎಳನೀರು ಕುಡಿಯದೇ ಇದ್ರೆ ನಿಮ್ಮ ದೇಹಕ್ಕೆ ಸಿಗುವ ಪರಿಣಾಮಕಾರಿ ಅಂಶಗಳನ್ನು ಮಿಸ್ ಮಾಡಿಕೊಳ್ತೀರಿ.ಇಲ್ಲಿ ಕಾರ್ಕಳದ  ಆರ್ಯುರ್ವೇದ ವೈದ್ಯೆ ಡಾ. ಹರ್ಷಾ ಕಾಮತ್ ಎಳನೀರಿನ ಒಂದಷ್ಟು ಉಪಯೋಗಗಳ ಕುರಿತು ಮಾಹಿತಿ ನೀಡಿದ್ದಾರೆ. ಡಾಕ್ಟರ್ ನೀಡಿದ ಸಲಹೆ ಪಾಲಿಸಿದ್ರೆ ನಿಮ್ಮ ಆರೋಗ್ಯ ಸೇಫಾಗಿರೋದು ಖಂಡಿತ.

ಎಳನೀರು ವಿಶ್ವದ ಸುರಕ್ಷಿತ  ತಂಪು ಪಾನೀಯ ಎಂದು ಹೇಳಲಾಗುತ್ತದೆ.ಕರಾವಳಿ ಪ್ರದೇಶದಲ್ಲಿ ಹೇರಳವಾಗಿ ದೊರಕುವ ಈ ಎಳನೀರು ನಮ್ಮ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಇದರಲ್ಲಿ ವಿಟಮಿನ್, ಫಾಸ್ಪರಸ್, ಪೊಟ್ಯಾಷಿಯಂ, ಮೆಗ್ನೇಷಿಯಂ, ಸೋಡಿಯಂ ಇರುವುದರಿಂದ ದೇಹದ ನಿರ್ಜಲೀಕರಣದಿಂದ ನಮ್ಮನ್ನು ರಕ್ಷಿಸುತ್ತದೆ. ಇದು ಶೀತ ಪ್ರಕೃತಿ ಹಾಗು ಮಧುರ ಗುಣಗಳಿಂದ  ಕೂಡಿರುವುದರಿಂದ ಜೀರ್ಣಕಾರಿ ಹಾಗೂ ಹೃದಯಕ್ಕೆ ಒಳ್ಳೆಯದು.

ಎಳನೀರಿನಿಂದ ಏನ್ ಉಪಯೋಗ ಅಂದ್ರೆ !

  • ನಮ್ಮ ದೇಹದಲ್ಲಿ ಇರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ .
  • ಎಳನೀರಿಗೆ ಶೀತ ಪ್ರಕೃತಿ ಇರುವುದರಿಂದ ಇದು ಪಿತ್ತ ಪ್ರಕೃತಿ ಮನುಷ್ಯರಿಗೆ ಒಳ್ಳೆಯದು. ಇದು ಪಿತ್ತದೋಷವನ್ನು ಕಡಿಮೆಗೊಳಿಸುತ್ತದೆ. ಬಿಕ್ಕಳಿಕೆ ಹಾಗೂ ಆಸಿಡಿಟಿಯನ್ನು ಕಡಿಮೆಮಾಡುತ್ತದೆ. ಕಣ್ಣು, ಕೈ ಕಾಲು ಉರಿಯನ್ನು ಶಮನಗೊಳಿಸುತ್ತದೆ. ದೇಹವನ್ನು ತಂಪು ಗೊಳಿಸುತ್ತದೆ.
  •  ಇದರಲ್ಲಿ ವಿಟಮಿನ್ ಹಾಗೂ ಮಿನರಲ್ಸ್ ಹೇರಳವಾಗಿ ಇರುವುದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ದೊರೆಯುತ್ತದೆ.
  •  ಎಳನೀರು ಹೃದಯಕ್ಕೆ ಕೂಡ ಹಿತ. ಇದರಲ್ಲಿರುವ ಪೋಟಾಷಿಯಂ ನಿಂದ ಹಾರ್ಟ್ ಅಟ್ಯಾಕ್  ಬರುವ ಸಾಧ್ಯತೆ ಕಡಿಮೆ. ಬಿಪಿ ಹಾಗೂ ಕೊಲೆಸ್ಟ್ರಾಲನ್ನು ಕಡಿಮೆಗೊಳಿಸುತ್ತದೆ. ಯಕೃತ್ತಿ ಹಾಗೂ ಕಿಡ್ನಿ ಸ್ಟೋನ್ ಇರುವವರಿಗೆ ಕೂಡ ಇದು ಬೆಸ್ಟ್

  • ಇದರಲ್ಲಿ ಕ್ಯಾಲ್ಷಿಯಂ ಹಾಗೂ ಮೆಗ್ನೀಶಿಯಂ ಇರುವುದರಿಂದ ನಮ್ಮ ಎಲುಬನ್ನು ಗಟ್ಟಿಗೊಳಿಸುತ್ತದೆ.
  • ಇದು ಕಣ್ಣಿಗೆ ಹಾಗೂ ಮೆದುಳಿಗೆ ಹಿತ. ನಮ್ಮ ಮೆಂಟಲ್ ಸ್ಟ್ರೆಸ್ ಕಡಿಮೆ ಮಾಡುತ್ತದೆ.
  • ನಮ್ಮ ತ್ವಚೆಗೆ ಕೂಡ ಒಳ್ಳೆಯದು. ತ್ವಚೆಯನ್ನು ಮೃದು ಹಾಗೂ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದ..ಕೊಬ್ಬನ್ನು ಕರಗಿಸುವುದರಿಂದ ನಮ್ಮ ದೇಹದ ತೂಕವನ್ನು ಕಡಿಮೆಗೊಳಿಸಲು  ಸಹಾಯ ಮಾಡುತ್ತದೆ .
  • ದಿವಸಕ್ಕೆ ಎರಡು ಗ್ಲಾಸ್ ಎಳೆನೀರು ಕುಡಿಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ .

ಆದರೆ ಎಳನೀರನ್ನು ಅಡಿಗೆಗೆ ಬಳಸಕೂಡದು.ಅದರಲ್ಲಿರುವ ಪೋಷಕಾಂಶಗಳು ಹಾಳಾಗುತ್ತದೆ. ಶೀತ, ಕೆಮ್ಮು,ಅತಿಸಾರ,ಲೋ ಬಿಪಿ ಇದ್ದವರು ಎಳನೀರನ್ನು ಸೇವಿಸಬಾರದು.

ಡಾ.ಹರ್ಷಾ ಕಾಮತ್