ಉಡುಪಿ: ವರ್ತಮಾನದ ಸಾಮಾಜಿಕ ರಾಜಕೀಯ ಸಮಸ್ಯೆಗಳು ಮತ್ತು ಪಕ್ಷದ ಸ್ಪಂದನೆಯ ಸಾಧನೆಗಳ ನಡುವಿನ ಜನಪರ ಸಂಪರ್ಕ ಸೇತುವಾಗಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳನ್ನು ಸದ್ಭಳಕೆ ಮಾಡಿಕೊಳ್ಳುವುದು ಇಂದಿನ ಆಧ್ಯತೆಯಾಗಿದೆ ಎಂದು ಕೆಪಿಸಿಸಿ ಮೈಸೂರು ವಿಭಾಗದ ಉಸ್ತುವಾರಿ ರಾಜು ಹೇಳಿದ್ದಾರೆ.
ಅವರು ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಇಂದಿರಾ ಸಭಾಂಗಣದಲ್ಲಿ ಮಾಧ್ಯಮ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರನ್ನುದ್ದೇಶಿಸಿ ಮಾತಾಡುತ್ತಿದ್ದರು.
ದಾಖಲೆಗಳಿಲ್ಲದ ಆರೋಪಗಳಿಂದ ಎದುರಾಳಿಗಳನ್ನು ಹಣಿಯಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳನ್ನು ಮಿಥ್ಯಾರೋಪಗಳ ತಾಣವಾಗಿಸದೆ ಸತ್ಯ ಶೋಧನೆಯೊಂದಿಗೆ ಜನರ ವಿಶ್ವಾಸಗಳಿಸ ಬೇಕು. ವೈಯಕ್ತಿಕ ತೇಜೋವಧೆಯಾದಾಗ ತ್ವರಿತ ಪ್ರತಿಭಟನೆ ಮತ್ತು ಎದುರಾಳಿಗಳ ವ್ಯವಸ್ಥಿತ ಪಿತೂರಿಗಳ ವಿರುದ್ಧ ಸಾಂಘಿಕ ಹೋರಾಟದ ನಿಲುವಿನ ಪತ್ರಿಕಾ ಹೇಳಿಕೆಗಳ ಮೂಲಕ ಜನರಿಗೆ ಸತ್ಯವನ್ನು ತಿಳಿಸಿ ಪಕ್ಷವನ್ನು ಬಲಪಡಿಸ ಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆ ವಹಿಸಿ ಪ್ರಸ್ತಾವನೆ ಗೈದು ಮಾಧ್ಯಮ ಮತ್ತು ಜಾಲತಾಣಗಳ ಔಚಿತ್ಯದ ಬಗ್ಗೆ ಮಾತಾಡಿ ಈ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಗುರಿ ಸಾಧನೆಯ ಮಾಹಿತಿ ನೀಡಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಸ್ವಾಗತಿಸಿದರು ಪ್ರಧಾನ ಕಾರ್ಯದರ್ಶಿ ಕೆ. ಅಣ್ಣಯ್ಯ ಶೇರಿಗಾರ್ ವಂದನಾರ್ಪಣೆ ಗೈದರು. ಕೆಪಿಸಿಸಿ ಮಾಜಿ ಪ್ರ. ಕಾರ್ಯದರ್ಶಿ ಎಂ.ಎ. ಗಫೂರ್, ವೆರೋನಿಕಾ ಕರ್ನೆಲಿಯೊ, ಮುರಳಿ ಶೆಟ್ಟಿ, ನವೀನ್ಚಂದ್ರ ಜೆ. ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ಬಿ. ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕುಶಲ್ ಶೆಟ್ಟಿ, ಬಿಪಿನ್ಚಂದ್ರ ಪಾಲ್ ನಕ್ರೆ, ದೀಪಕ್ ಕೋಟ್ಯಾನ್, ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ, ನವೀನ್ಚಂದ್ರ ಸುವರ್ಣ, ಸದಾಶಿವ ದೇವಾಡಿಗ, ಹರಿಪ್ರಸಾದ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ದಿನಕರ್ ಹೇರೂರು, ಶಂಕರ್ ಕುಂದರ್, ಇಸ್ಮಾಯಿಲ್ ಆತ್ರಾಡಿ, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಶಶಿಧರ ಶೆಟ್ಟಿ ಎಲ್ಲೂರು, ಹರೀಶ್ ಶೆಟ್ಟಿ ಪಾಂಗಾಳ, ಸಂಕಪ್ಪ ಎ., ಸೌರಭ್ ಬಲ್ಲಾಳ್, ರಮೇಶ್ ಕಾಂಚನ್, ಯತೀಶ್ ಕರ್ಕೆರಾ, ಜನಾರ್ಧನ್ ಭಂಡಾರ್ಕರ್, ಜ್ಯೋತಿ ಹೆಬ್ಬಾರ್, ರೋಶನಿ ಒಲಿವೆರಾ, ಗೀತಾ ವಾಗ್ಲೆ, ಡಾ. ಸುನೀತಾ ಶೆಟ್ಟಿ ಉಪಸ್ಥಿತರಿದ್ದರು.