ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭಾಷಣ ಪ್ರಕರಣ ತೀವ್ರ ಏರಿಕೆ: ರಟ್ಜರ್ಸ್ ವಿಶ್ವವಿದ್ಯಾಲಯದ ವಿಶ್ಲೇಷಣೆ

ಇತ್ತೀಚೆಗೆ, ಅಮೇರಿಕಾದ ರಟ್ಜರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭಾಷಣ ಪ್ರಕರಣಗಳಲ್ಲಿ ತೀವ್ರ ಏರಿಕೆಯ ಪುರಾವೆಗಳನ್ನು ಕಂಡುಕೊಂಡಿದ್ದಾರೆ. ಅವರ 1 ಮಿಲಿಯನ್ ಟ್ವೀಟ್‌ಗಳ ವಿಶ್ಲೇಷಣೆಯ ಪ್ರಕಾರ, ಇರಾನಿನ ಟ್ರೋಲ್‌ಗಳು ಹಿಂದೂ ಸಮುದಾಯವು ಅಲ್ಪಸಂಖ್ಯಾತರ ಜನಾಂಗೀಯ ಹತ್ಯೆ ಮಾಡುತ್ತಿದೆ ಎಂದು ಆರೋಪಿಸುವ ಅಭಿಯಾನದ ಭಾಗವಾಗಿ ವಿಭಜನೆಯನ್ನು ಸೃಷ್ಟಿಸಲು ಮೀಮ್‌ಗಳು, ಹಿಂದೂ ವಿರೋಧಿ ರೂಢಿಬದ್ದ ಧಾರಣೆಗಳನ್ನು ಹರಡುತ್ತಿದೆ.

“ದುರದೃಷ್ಟವಶಾತ್, ಹಿಂದೂ ಜನಸಂಖ್ಯೆಯು ಎದುರಿಸುತ್ತಿರುವ ಮತಾಂಧತೆ ಮತ್ತು ಹಿಂಸಾಚಾರದಲ್ಲಿ ಹೊಸದೇನೂ ಇಲ್ಲ. ಹೊಸದೇನೆಂದರೆ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ನಮ್ಮ ಹಿಂದಿನ ಅಧ್ಯಯನವು ಸಾಮಾಜಿಕ ಮಾಧ್ಯಮದ ಮೂಲಕ ದ್ವೇಷದ ಸಂದೇಶಗಳ ತೀವ್ರತೆ ಮತ್ತು ನೈಜ-ಪ್ರಪಂಚದ ಹಿಂಸಾಚಾರದ ಸ್ಫೋಟದ ನಡುವಿನ ಪರಸ್ಪರ ಸಂಬಂಧವನ್ನು ತೋರಿಸಿದೆ” ಎಂದು ರಟ್ಜರ್ಸ್ ಯೂನಿವರ್ಸಿಟಿ-ನ್ಯೂ ಬ್ರನ್ಸ್‌ವಿಕ್‌ನಲ್ಲಿರುವ ಮಿಲ್ಲರ್ ಸೆಂಟರ್ ಮತ್ತು ಈಗಲ್‌ಟನ್ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಈ ಎರಡರ ನಿರ್ದೇಶಕ ಜಾನ್ ಜೆ. ಫಾರ್ಮರ್ ಜೂನಿಯರ್ ಹೇಳಿದ್ದಾರೆ.

ಹಿಂದೂ ವಿರೋಧಿ ಅಪಪ್ರಚಾರ: ಟೆಲಿಗ್ರಾಮ್ ಮತ್ತು ಇತರೆಡೆಗಳಲ್ಲಿ ತೀವ್ರವಾದ ಇಸ್ಲಾಮಿಸ್ಟ್ ವೆಬ್ ನೆಟ್‌ವರ್ಕ್‌ಗಳಲ್ಲಿ ಮೀಮ್‌ಗಳು, ಸಂದೇಶಗಳಂತಹ ಸಾಮಾಜಿಕ ಮಾಧ್ಯಮ ಸಂವಹನದ ಜನಪ್ರಿಯ ವಿಧಾನಗಳನ್ನು ಹೇಗೆ ಸಾಮಾಜಿಕ ಮಾಧ್ಯಮದಲ್ಲಿ ಹೇರಳವಾಗಿ ಹಂಚಿಕೊಳ್ಳಲಾಗುತ್ತಿದೆ ಎಂಬುದನ್ನು ‘ಎ ಕೇಸ್ ಸ್ಟಡಿ ಆಫ್ ಹಿಂದೂಫೋಬಿಯಾ’ ವಿವರಿಸುತ್ತದೆ.

ಹಿಂದೂಫೋಬಿಕ್ ಕೋಡ್ ಪದಗಳು ಮತ್ತು ಮೀಮ್‌ಗಳು ಜುಲೈನಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು, ವಿಶೇಷವಾಗಿ ಭಾರತದಲ್ಲಿನ ಧಾರ್ಮಿಕ ಉದ್ವಿಗ್ನತೆ ಮತ್ತು ಉದಯಪುರದಲ್ಲಿ ಇತ್ತೀಚೆಗೆ ನಡೆದ ವ್ಯಕ್ತಿಯ ಶಿರಚ್ಛೇದದ ಬಳಿಕ. ಹೆಚ್ಚಿನ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಚಿತ್ರಗಳ ರೂಪದಲ್ಲಿ ದ್ವೇಷವನ್ನು ಹರಡಲು ಬಳಸುವ ಸಂದೇಶದ ಕೋಡ್ ಪದಗಳ ಬಗ್ಗೆ ತಿಳಿದಿರುವುದಿಲ್ಲ.

“ದ್ವೇಷದ ಸಂದೇಶವು ನೈಜ-ಪ್ರಪಂಚದ ಹಿಂಸಾಚಾರಕ್ಕೆ ಕಾರಣವಾಗುವ ಮೊದಲು ವರದಿಯು ಸಕಾಲಿಕ ಎಚ್ಚರಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ನಮ್ಮ ಆಶಯವಾಗಿದೆ”, ಎಂದು ಮಾಜಿ ಯುಎಸ್ ಕಾಂಗ್ರೆಸ್‌ಮನ್ ಮತ್ತು ಮಿಲ್ಲರ್ ಸೆಂಟರ್ ರಿಸರ್ಚ್ ಸಹವರ್ತಿ ಮತ್ತು ಸಂದರ್ಶಕ ವಿದ್ವಾಂಸ ಡೆನ್ವರ್ ರಿಗ್ಲ್‌ಮ್ಯಾನ್ ಹೇಳಿದ್ದಾರೆ.

ವಿಶ್ಲೇಷಣೆಯು 2020 ರಲ್ಲಿ ಬಿಡುಗಡೆಯಾದ ಎನ್‌ಸಿಆರ್‌ಐ ಮತ್ತು ರಟ್ಜರ್ಸ್ ಸೆಂಟರ್‌ಗಳ ವರದಿಗಳನ್ನು ಆಧರಿಸಿದೆ. ಸಂಸ್ಥೆಗಳು ದ್ವೇಷ ಮತ್ತು ನೈಜ-ಪ್ರಪಂಚದ ಹಿಂಸಾಚಾರವನ್ನು ಹರಡಲು ಪಿತೂರಿ ಸಿದ್ಧಾಂತಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಪರಿಶೀಲಿಸುತ್ತಾರೆ.

source:https://www.news18.com/news/india/us-research-finds-evidence-of-sharp-rise-in-hate-speech-cases-against-hindus-on-social-media-5544979.html