ರಾಮೇಶ್ವರಂ: ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಅಭಿವೃದ್ಧಿ ಚಟುವಟಿಕೆಗಳನ್ನು ವೀಕ್ಷಿಸಿದ ನಂತರ ಅಮೆರಿಕದಲ್ಲಿ ಸಂಕೀರ್ಣ ರಾಕೆಟ್ ಮಿಷನ್ಗಳನ್ನು ಅಭಿವೃದ್ಧಿಪಡಿಸುವ ತಜ್ಞರು ಭಾರತವು ತನ್ನ ಬಾಹ್ಯಾಕಾಶ ತಂತ್ರಜ್ಞಾನವನ್ನು ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
ಕಾಲ ಬದಲಾಗಿದೆ ಮತ್ತು ಭಾರತವು ಅತ್ಯುತ್ತಮ ಸಾಧನಗಳು ಮತ್ತು ರಾಕೆಟ್ಗಳನ್ನು ನಿರ್ಮಿಸಲು ಸಮರ್ಥವಾಗಿದೆ ಮತ್ತು ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಿದ್ದಾರೆ. ನಮ್ಮ ದೇಶ ಅತ್ಯಂತ ಶಕ್ತಿಶಾಲಿ ರಾಷ್ಟ್ರ. ದೇಶದಲ್ಲಿನ ಜ್ಞಾನ ಮತ್ತು ಬುದ್ಧಿವಂತಿಕೆಯ ಮಟ್ಟವು ವಿಶ್ವದಲ್ಲೇ ಅತ್ಯುತ್ತಮವಾಗಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.
ಅಮೇರಿಕಾದಲ್ಲಿ ಅತ್ಯಂತ ಕಷ್ಟಕರವಾದ ರಾಕೆಟ್ ಕಾರ್ಯಾಚರಣೆಯನ್ನು ಮಾಡುವ NASA-JPL(ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ) ನ ತಜ್ಞರು ಚಂದ್ರಯಾನ-3 ರ ಬಾಹ್ಯಾಕಾಶ ನೌಕೆಯ ವಿನ್ಯಾಸಗೊಳಿಸಿದಾಗ ಮತ್ತು ಅಭಿವೃದ್ಧಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ, “ಯಾವುದೇ ಟೀಕೆಗಳಿಲ್ಲ. ಎಲ್ಲವೂ ಒಳ್ಳೆಯದೇ ಆಗಲಿದೆ” ಎಂದಿದ್ದರು. ಮಾತ್ರವಲ್ಲದೆ, “ಈ ವೈಜ್ಞಾನಿಕ ಉಪಕರಣಗಳನ್ನು ನೋಡಿ, ಅವು ತುಂಬಾ ಅಗ್ಗವಾಗಿವೆ. ನಿರ್ಮಿಸಲು ತುಂಬಾ ಸುಲಭ ಮತ್ತು ಅವುಗಳು ಉನ್ನತ ತಂತ್ರಜ್ಞಾನವನ್ನು ಹೊಂದಿವೆ. ನೀವು ಅದನ್ನು ಹೇಗೆ ನಿರ್ಮಿಸಿದ್ದೀರಿ? ನೀವು ಇದನ್ನು ಅಮೆರಿಕಕ್ಕೆ ಏಕೆ ಮಾರಾಟ ಮಾಡಬಾರದು” ಎಂದು ಇಸ್ರೋ ಅನ್ನು ಕೇಳಿದ್ದರು ಎಂದು ಸೋಮನಾಥ್ ಹೇಳಿದ್ದಾರೆ.
ರಾಕೆಟ್ಗಳು, ಉಪಗ್ರಹಗಳನ್ನು ನಿರ್ಮಿಸಲು ಮತ್ತು ನಮ್ಮ ರಾಷ್ಟ್ರವನ್ನು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೆಚ್ಚು ಶಕ್ತಿಯುತವಾಗಿಸಲು ಮುಂದೆ ಬನ್ನಿ ಎಂದು ದೇಶದ ಯುವಕರಿಗೆ ಕರೆ ನೀಡಿದ್ದಾರೆ.