ಉಡುಪಿ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ( ರಿ.), ಮಣಿಪಾಲ ಇದರ ನೂತನ ಅಧ್ಯಕ್ಷರಾಗಿ ಉಪೇಂದ್ರ ನಾಯಕ್, ಅರ್ಬಿ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಉಪಾಧ್ಯಕ್ಷರಾಗಿ ಸುಚಿಂದ್ರ ನಾಯಕ್ ಎರ್ಲಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಸುಮಿತ್ರಾ ಎಚ್ ನಾಯಕ್ ದೇವಿನಗರ, ಜೊತೆ ಕಾರ್ಯದರ್ಶಿಯಾಗಿ ರಾಮದಾಸ್ ಪ್ರಭು, ಕುಕ್ಕುದಕಟ್ಟೆ ಮತ್ತು ಕೋಶಾಧಿಕಾರಿಯಾಗಿ ವಿಠಲ ನಾಯಕ್, ಸಗ್ರಿ ಇವರು ಆಯ್ಕೆಯಾಗಿರುತ್ತಾರೆ. ಇತ್ತೀಚಿಗೆ ಜರಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ ಜರಗಿದ್ದು ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
















