ಉಡುಪಿ: ಶ್ರೀಮನ್ ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಸ್ನಾತಕ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇದರ ಸಹಯೋಗದಲ್ಲಿ ಭಾಗ್ಯಲಕ್ಷ್ಮಿ ಅಡಿಗ ಅವರು ಬರೆದಿರುವ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ “ಕ್ಯಾಲ್ಕುಲಸ್ ಎಂಡ್ ಲೀನಿಯರ್ ಆಲ್ಜಿಬ್ರಾ” ಪುಸ್ತಕ ಬಿಡುಗಡೆ ಕಾರ್ಯಕ್ರಮವು ಕಾಲೇಜಿನ ಭೀಮ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಎಸ್.ಎಮ್.ಎಸ್.ಪಿ ಸಭಾದ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ, ಎಲ್ಲಾ ಕ್ಷೇತ್ರದಲ್ಲಿ ಗಣಿತದ ಅವಶ್ಯಕತೆ ಇದ್ದು, ಗಣಿತ ಭಾಗ್ಯವನ್ನು ತರುವ ವಿದ್ಯೆಯಾಗಿದೆ ಎಂದರು. ಲೇಖಕಿ ಭಾಗ್ಯಲಕ್ಷ್ಮಿ ಅಡಿಗ ಮಾತನಾಡಿ, ಗಣಿತ ಎಂಬುವುದು ಕಬ್ಬಿಣದ ಕಡಲೆಯಲ್ಲ, ಅದು ಅತ್ಯಂತ ಸರಳವಾಗಿದೆ. ಈ ಪುಸ್ತಕ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯೋಗಕಾರಿ ಎಂದು ಹೇಳಿದರು.
ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್. ಲಕ್ಷ್ಮೀನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.
ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಧರ್ ಭಟ್ ಪ್ರಾರ್ಥಿಸಿದರು. ಗ್ರಂಥಪಾಲಕ ಹರಿಕೃಷ್ಣ ರಾವ್ ಸಗ್ರಿ ಸ್ವಾಗತಿಸಿದರು. ವಿನಯ ಹೆಗಡೆ ನಿರೂಪಿಸಿದರು. ಚಿನ್ಮಯ್ ಭಟ್ ವಂದಿಸಿದರು.