ಹೆಸರಿಡದ ಚಿತ್ರ ಆರ್​ ಮಾಧವನ್, ಜ್ಯೋತಿಕಾ , ಅಜಯ್​ ದೇವಗನ್​ ನಟನೆ : ಬಿಡುಗಡೆ ಮುಹೂರ್ತ ಫಿಕ್ಸ್​

ಸೂಪರ್​ ನ್ಯಾಚುರಲ್​ ಥ್ರಿಲ್ಲರ್​ ಕಥಾಹಂದರ ಹೊಂದಿರುವ ಹಿಂದಿ ಸಿನಿಮಾವೊಂದು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.ಅಜಯ್​ ದೇವಗನ್​, ಆರ್​ ಮಾಧವನ್​ ಮತ್ತು ಜ್ಯೋತಿಕಾ ನಟನೆಯ ಹೆಸರಿಡದ ಚಿತ್ರದ ರಿಲೀಸ್​ ಡೇಟ್​ ಇಂದು ಅನೌನ್ಸ್​ ಆಗಿದೆ . ಈ ಸಿನಿಮಾ ಮೂಲಕ 25 ವರ್ಷಗಳ ನಂತರ ಜ್ಯೋತಿಕಾ ಹಿಂದಿ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಕೊನೆಯ ಹಿಂದಿ ಸಿನಿಮಾ ‘ಡೋಲಿ ಸಾಜಾ ಕೆ ರಖನಾ’. ಈ ಚಿತ್ರವು 1997 ರಲ್ಲಿ ಬಿಡುಗಡೆಯಾಯಿತು. ಪ್ರಿಯದರ್ಶನ್​ ನಿರ್ದೇಶಿಸಿದ್ದರು. ಹೆಚ್ಚುವರಿಯಾಗಿ ನೋಡುವುದಾದರೆ, ನಟ ಜಾಂಕಿ ಬೋಡಿವಾಲಾ ಅವದ್ದು ಚೊಚ್ಚಲ ಹಿಂದಿ ಚಿತ್ರವಿದು. ಅವರು ಗುಜರಾತ್​ ಸಿನಿಮಾಗಳಾದ ಛೆಲೋ ದಿವಾಸ್​, ತಂಬುರೋ, ಚುಟ್ಟಿ ಜಶೆ ಛಕ್ಕಾ ಮತ್ತು ಬೌ ನೌ ವಿಚಾರ್​ಗಳಲ್ಲಿ ಕೆಲಸ ಮಾಡಿದ್ದಾರೆ.ಅಜಯ್​ ದೇವಗನ್​, ಆರ್​ ಮಾಧವನ್​ ಮತ್ತು ಜ್ಯೋತಿಕಾ ನಟನೆಯ ಹೆಸರಿಡದ ಚಿತ್ರದ ರಿಲೀಸ್​ ಡೇಟ್​ ಇಂದು ಅನೌನ್ಸ್​ ಆಗಿದೆ. ಸೂಪರ್​ 30, ಕ್ವೀನ್​ ಮತ್ತು ಗುಡ್​ ಬೈ ಮುಂತಾದ ಸೂಪರ್​ ಹಿಟ್​ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ವಿಕಾಸ್​ ಬಹ್ಲ್​ ನಿರ್ದೇಶನದಲ್ಲಿ ಈ ತ್ರಿಬಲ್​ ಸ್ಟಾರ್​ಗಳ ಸಿನಿಮಾ ಮೂಡಿಬರಲಿದೆ.

ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲು ಅಜಯ್​ ದೇವಗನ್​ ಅವರ ನಿರ್ಮಾಣ ಸಂಸ್ಥೆ ಅಜಯ್​ ದೇವಗನ್​ ಎಫ್​ಫಿಲ್ಮ್ಸ್ ಎಕ್ಸ್ (ಹಿಂದಿನ ಟ್ವಿಟರ್​)​ ವೇದಿಕೆಯನ್ನು ಬಳಸಿಕೊಂಡಿತು. “ಸೂಪರ್​ ನ್ಯಾಚುರಲ್​ ರೋಲರ್​ ಕೋಸ್ಟರ್​ ರೈಡ್​ಗೆ ಸಿದ್ಧರಾಗಿ! ವಿಕಾಸ್ ಬಹ್ಲ್​ ನಿರ್ದೇಶನದಲ್ಲಿ ಅಜಯ್​ ದೇವಗನ್​, ಆರ್​ ಮಾಧವನ್​ ಮತ್ತು ಜ್ಯೋತಿಕಾ ಅವರ ಮುಂಬರುವ ಥ್ರಿಲ್ಲರ್​ಗಾಗಿ ಬ್ರೇಸ್​ ಮಾಡಿ. ಮಾರ್ಚ್​ 8, 2024 ನಿಮ್ಮ ಕ್ಯಾಲೆಂಡರ್​ನಲ್ಲಿ ಗುರುತಿಸಿಕೊಳ್ಳಿ” ಎಂದು ಎಕ್ಸ್​ನಲ್ಲಿ ಬರೆದುಕೊಂಡಿದೆ. ​

ಇನ್ನೂ ನಟ ಅಜಯ್​ ದೇವಗನ್ ಈ ಸಿನಿಮಾ ಮಾತ್ರಲ್ಲದೇ ಮೈದಾನ್​ ಪ್ರೀಮಿಯರ್​​ಗೆ ಕಾಯುತ್ತಿದ್ದಾರೆ. ಜೊತೆಗೆ ರೋಹಿತ್​ ಶೆಟ್ಟಿ ನಿರ್ದೇಶನದಲ್ಲಿ ಮತ್ತೊಮ್ಮೆ ‘ಸಿಂಗಂ ಎಗೈನ್’​ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್​, ಅಜಯ್​ ದೇವಗನ್​ ಎಫ್​ಫಿಲ್ಮ್ಸ್​ ಮತ್ತು ಪನೋರಮಾ ಸ್ಟುಡಿಯೋಸ್​ ಇಂಟರ್​ನ್ಯಾಷನಲ್​ ಮೂಲಕ ಪ್ರಸ್ತುತಪಡಿಸಲಾಗುತ್ತಿದೆ. ಹೆಸರಿಡದ ಚಿತ್ರವನ್ನು ಅಜಯ್​ ದೇವಗನ್​, ಜ್ಯೋತಿ ದೇಶಪಾಂಡೆ, ಕುಮಾರ್​ ಮಂಗತ್​ ಪಾಠಕ್​ ಮತ್ತು ಅಭಿಷೇಕ್​ ಪಾಠಕ್​ ಸೇರಿದಂತೆ ಪ್ರತಿಭಾವಂತ ತಂಡ ನಿರ್ಮಾಣ ಮಾಡಿದೆ. ಈ ಹೆಸರಿಡದ ಸಿನಿಮಾವು 2024ರ ಮಾರ್ಚ್​ 8 ರಂದು ತೆರೆ ಕಾಣಲಿದೆ. ಪ್ರತಿಭಾವಂತ ಕಲಾವಿದರ ಸಹಯೋಗದಲ್ಲಿ ಸಿನಿಮಾ ತಯಾರಾಗುತ್ತಿದ್ದು, ಪ್ರೇಕ್ಷಕರಿಗೆ ಮರೆಯಲಾಗದ ಅನುಭವವನ್ನು ನೀಡಲಿದೆ ಎನ್ನಲಾಗಿದೆ.